ಶಾಲೆಗಳಿಗೂ ಸರಬರಾಜು ಮಾಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.ರಾಜ್ಯದಲ್ಲಿ 72 ಸಾವಿರಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳಿವೆ.1 ಕೋಟಿಗೂ ಹೆಚ್ಚು ಮಕ್ಕಳು ಇದ್ದಾರೆ.ಈಗಾಗಲೇ ಶಿಕ್ಷಣ ಇಲಾಖೆ ಮುದ್ರಣಕ್ಕೆ 262 ಕೋಟಿ ರೂಪಾಯಿ ಖರ್ಚು ಮಾಡಿದೆ.ಮತ್ತೆ ಪಠ್ಯಪರಿಷ್ಕರಣೆ ಮಾಡೋದು ಕಷ್ಟ ಸಾಧ್ಯವಾಗಿದೆ.ಕಳೆದ ವರ್ಷ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಸಮಿತಿ ನಡೆಸಿದ್ದ ಪರಿಷ್ಕರಣೆ ವಿವಾದವಾಗಿತ್ತು.ಕೆಲ ಪಠ್ಯಗಳನ್ನ ಸಮಿತಿ ಕೈಬಿಡಲಾಗಿತ್ತು.ಮತ್ತೆ ಕೈ ಬಿಟ್ಟ ಪಠ್ಯಗಳಿಗೆ ಕಾಂಗ್ರೆಸ್ ಸರ್ಕಾರ ಜೀವ ತುಂಬುವ ಸಾಧ್ಯತೆ ಇದೆ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.