ಬೀದರ್ ದರೋಡೆ ಪ್ರಕರಣದ ಇಬ್ಬರ ಗುರುತು ಪತ್ತೆ, ಆರೋಪಿಗಳ ಡಿಟೇಲ್ಸ್‌ ಹೀಗಿದೆ

Sampriya

ಶನಿವಾರ, 15 ಫೆಬ್ರವರಿ 2025 (17:06 IST)
Photo Courtesy X
ಬೀದರ್‌: ನಗರದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಮುಖ್ಯ ಕಚೇರಿ ಎದುರು ನಡೆದ ದರೋಡೆ ಪ್ರಕರಣದ ಇಬ್ಬರು ದರೋಡೆಕೋರರ ಗುರುತು ಪತ್ತೆ ಹಚ್ಚಲಾಗಿದೆ.

ಬೀದರ್‌ ಜಿಲ್ಲಾ ಪೊಲೀಸರು ಇದೀಗ ಇಬ್ಬರು ದರೋಡೆಕೋರರ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಗಳನ್ನು ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಫತೇಪುರ ಫುಲ್‌ವರಿಯಾ ನಿವಾಸಿ ಅಮನ್‌ ಕುಮಾರ್‌ ರಾಜಕಿಶೋರ್‌ ಸಿಂಗ್‌ ಹಾಗೂ ಅದೇ ಜಿಲ್ಲೆಯ ಮಹಿಸೋರ್‌ ನಿವಾಸಿ ಅಲೋಕ್‌ ಕುಮಾರ್‌ ಅಲಿಯಾಸ್‌ ಅಶುತೋಷ್‌ ಶತ್ರುಘ್ನ ಪ್ರಸಾದ್‌ ಸಿಂಗ್‌ ಕೃತ್ಯ ಎಸಗಿದವರು ಎಂದು ಗುರುತಿಸಲಾಗಿದೆ,


ಇನ್ನೂ ತನಿಖೆಯಲ್ಲಿ ಈ ಹಿಂದೆಯೂ ಇವರಿಬ್ಬರು ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ