ಈ ಘಟನೆ ಮಂಗಳೂರು ನಗರದ ಉರ್ವಾದ ಚಿಲಿಂಬಿ-ಕೋಟೆಕಣಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ವಿವೇಕಾನಂದ ಶೆಣೈ ಎಂಬುವವರು ಕೋಟೆಕಣಿಯಿಂದ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಕಾರಿನಲ್ಲಿದ್ದ ವಾಟರ್ ಬಾಟಲಿ ಕಾರಿನ ಬ್ರೇಕ್ ಪೆಡಲ್ ಅಡಿ ಸಿಲುಕಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು ಯರ್ರಾಬಿರ್ರಿ ಚಲಿಸಿದೆ. ಪರಿಣಾಮ 2 ದ್ವಿಚಕ್ರ ವಾಹನ ಹಾಗೂ 2 ಕಾರುಗಳಿಗೆ ಡಿಕ್ಕಿ ಹೊಡೆದು ನಿಂತಿದೆ.