ವಾಸ್ತುಪ್ರಕಾರ ಮತ ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು
ಗುರುವಾರ, 5 ಡಿಸೆಂಬರ್ 2019 (10:39 IST)
ಮಂಡ್ಯ : ಅನರ್ಹ ಶಾಸಕರ ರಾಜೀನಾಮೆಯಿಂದ ತೆರವುಗೊಂಡ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಈ ವೇಳೆ ಕೆ.ಆರ್ ಪೇಟೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಅವರು ವಾಸ್ತುಪ್ರಕಾರ ತಮ್ಮ ಮತ ಚಲಾಯಿಸಿದ್ದಾರೆ.
ಕೆ.ಆರ್ ಪೇಟೆ ತಾಲೂಕಿನ ಬಂಡಿಹೊಳೆ ಮತಗಟ್ಟೆ ಸಂಖ್ಯೆ 151ರಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ ದೇವರಾಜು ಅವರು ಮತದಾನ ಮಾಡುವ ಮೊದಲು ಚುನಾವಣಾ ಸಿಬ್ಬಂದಿ ಮಂತ್ರಯಂತ್ರವಿಟ್ಟ ವಾಸ್ತು ಸರಿಯಿಲ್ಲ ಎಂದು ಅದನ್ನು ವಾಸ್ತುಪ್ರಕಾರ ತಿರುಗಿಸಿಡಲು ಹೇಳಿ ಬಳಿಕ ಮತದಾನ ಮಾಡಿದ್ದಾರೆ.