ಈ ವರ್ಷದ ಕೊನೆಯ ಸೂರ್ಯಗ್ರಹಣ ಮುಕ್ತಾಯ- ದೇವಾಲಯಗಳ ಕಡೆ ಮುಖ ಮಾಡಿದ ಭಕ್ತಾದಿಗಳು

ಮಂಗಳವಾರ, 25 ಅಕ್ಟೋಬರ್ 2022 (20:49 IST)
ದೀಪಾವಳಿ ಹೊತ್ತಲ್ಲೇ ೨೭ ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸಿದೆ. ಈ ವರ್ಷದ ಕೊನೆಯ ಸೂರ್ಯ ಗ್ರಹಣ ಇಂದು ಸಂಭವಿಸಿದ್ದು, ಇಡೀ ಜಗತ್ತೇ ಅತ್ಯಂತ ಕುತೂಹಲದಿಂದ ಕೌತುಕವನ್ನ ಕಣ್ತುಂಬಿಕೊಂಡಿದೆ ಗ್ರಹಣಸ್ರ‍್ಶಕಾಲ  ಮಧ್ಯಾಹ್ನ ೨:೧೫ ಶುರುವಾಗಿ, ಗ್ರಹಣ ಮೋಕ್ಷಕಾಲ – ಸಂಜೆ ೬:೩೦  ಮುಕ್ತಾಯಗೊಂಡಿದೆ.
 
 ಗ್ರಹಣ ಸಂದರ್ಭದಲ್ಲಿ ದೇವಸ್ಥಾನಗಳ ಬಾಗಿಲು ಬಂದ್ ಮಾಡಲಾಗಿತ್ತು ತದನಂತರದಲ್ಲಿ ಗ್ರಹಣ ಮುಗಿದ ಬಳಿಕ ದೇವಸ್ಥಾನಗಳನ್ನು ಶುದ್ದಗೊಳಿಸಿ ಪೂಜಾ ಪುನಸ್ಕಾರಗಳನ್ನು ನೇರವೇರಿಸಲಾಯಿತು. ಭಕ್ತರಿಗೂ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ