ಬೆಂಗಳೂರು: -ಸಸ್ಯಕಾಶಿ ಲಾಲ್ ಬಾಗ್ ಸಿಲಿಕಾನ್ ಸಿಟಿ ಜನರ ನೆಚ್ಚಿನ ತಾಣ. ವಿಶ್ವ ವಿಖ್ಯಾತಿ ಪಡೆದಿರುವ ಲಾಲ್ ಬಾಗ್ ಗೆ ಸವಿರಾರು ಜನ ಪ್ರತಿನಿಧಿ ಬರ್ತಾರೆ ಜನರ ಅನುಕೂಲಕ್ಕಾಗಿ ಒಂದು ಹೈಟೆಕ್ ಗ್ರಂಥಾಲಯ ನಿರ್ಮಾಣವಾಗ್ತಿದೆ.ಲಾಲ್ ಬಾಗ್ ನಲ್ಲಿ ಪ್ರತಿವರ್ಷ ಫಲಪುಷ್ಪ ಪ್ರದರ್ಶನ ನಡೆಯುತ್ತೆ. ಈ ಪುಷ್ಪ ಪ್ರದರ್ಶನ ವೀಕ್ಷಣೆ ಮಾಡುವುದಕ್ಕೆಂದು ಬೆಂಗಳೂರು ಜಿಲ್ಲೆಯ ಹೊರರಾಜ್ಯದಿಂದ ಜನಸಾಗರ ಹರಿದುಬರುತ್ತೆ. ಅಷ್ಟೇ ಅಲ್ಲದೆ ಲಾಲ್ ಬಾಗ್ ಗೆ ಪ್ರತಿನಿಧಿ ಸಾವಿರಾರು ಜನರು ಬೇಟಿಕೊಡ್ತಾರೆ. ವಾಯುವಿಹಾರಕ್ಕೂ ಬರ್ತಾರೆ. ಆದ್ರೆ ಇಂತಹ ಕೊಂಚ ಸಮಯದಲ್ಲಿ ಮಾನಸಿಕಾರ್ಧನಕ್ಕೆ, ಕೊಂಚ ರಿಲೀಪ್ ಗೆ ಒಂದು ಲೈಬ್ರರಿ ಇದ್ರೆ ಎಷ್ಟು ಚನ್ನಾಗಿರುತ್ತೆ ಎಂದು ಎಲ್ಲಾರಿಗೂ ಅನ್ನಿಸದೇ ಇರುವುದಿಲ್ಲ. ಆದ್ರೆ ಈಗ ಲಾಲ್ ಬಾಗ್ ನಲ್ಲಿ ಜನರ ಅನುಕೂಲಕ್ಕಾಗಿ ಹೈಟೆಕ್ ಗ್ರಂಥಾಲಯ ನಿರ್ಮಾಣಮಾಡಿ ಅರ್ಧಕ್ಕೆ ಕೆಲಸ ಕೆಲಸ ನಿಲ್ಲಿಸಿದೆ.