ಪಬ್‍ ಜಿ ಗೇಮ್ ಆಡುವ ಹುಚ್ಚಿಗೆ ಬಲಿಯಾಯ್ತು ಯುವಕನ ಜೀವ

ಬುಧವಾರ, 6 ಫೆಬ್ರವರಿ 2019 (07:04 IST)
ಮುಂಬೈ : ಪಬ್‍ ಜಿ ಆಡಲು ಪೋಷಕರು ಹೊಸ ಮೊಬೈಲ್ ಕೊಡಿಸಲಿಲ್ಲವೆಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಮುಂಬೈನ ನೆಹರು ನಗರದಲ್ಲಿ ನಡೆದಿದೆ.


ಯುವಕ ಪಬ್‍ಜಿ ಗೇಮ್ ಆಡಲು 37 ಸಾವಿರ ರೂ. ಮೌಲ್ಯದ ಸ್ಮಾರ್ಟ್ ಫೋನ್ ಕೊಡಿಸಿ ಎಂದು ಪೋಷಕರ ಬಳಿ ಕೇಳಿಕೊಂಡಿದ್ದನು. ಆದರೆ ಪೋಷಕರು ಇದಕ್ಕೆ ನಿರಾಕರಿಸಿ 20,000 ರೂ.ಕ್ಕಿಂತ ಹೆಚ್ಚು ವೆಚ್ಚದ ಮೊಬೈಲ್ ಕೊಡಿಸುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಮನನೊಂದ ಯುವಕ ಹಗ್ಗದಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಈ ಘಟನೆಯನ್ನು ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ವಿಚಾರಣೆ ಕೂಡ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ