100 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಲಾರಿ

ಭಾನುವಾರ, 17 ಸೆಪ್ಟಂಬರ್ 2023 (16:20 IST)
ಚಾರ್ಮಾಡಿ ಘಾಟ್​​ನಲ್ಲಿ ಲಾರಿಯೊಂದು​ 100 ಅಡಿ ಪ್ರಪಾತಕ್ಕೆ ಉರುಳು ಬಿದ್ದಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಘಟನೆ ನಡೆದಿದ್ದು, ದಟ್ಟ ಮಂಜು ಹಾಗೂ ಮಳೆಯಿಂದ ದಾರಿ ಕಾಣದೆ ಲಾರಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಮರಕ್ಕೆ ಸಿಕ್ಕಿಕೊಂಡ ಕಾರಣ ಚಾಲಕ ಹಾಗೂ ಕ್ಲೀನರ್ ಬದುಕುಳಿದಿದ್ದು, ಮರ ಇಬ್ಬರನ್ನೂ ಕಾಪಾಡಿದೆ.ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲಿಯನ್ನ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ