ಪತ್ರಿಕೆಯ ಮುಖಪುಟ ವಿನ್ಯಾಸಗಾರ ಎಸಗಿದ್ದಾನೆ ಇಂತಹ ನೀಚ ಕೃತ್ಯ
ಗುರುವಾರ, 7 ಫೆಬ್ರವರಿ 2019 (05:28 IST)
ಬೆಂಗಳೂರು : ವಾರ ಪತ್ರಿಕೆಯ ಮುಖಪುಟ ವಿನ್ಯಾಸಗಾರನೊಬ್ಬ ಫೇಸ್ ಬುಕ್ ಮೂಲಕ ರೂಪದರ್ಶಿಗೆ ಅಶ್ಲೀಲ ಸಂದೇಶ ಕಳುಹಿಸಿ ಸೆಕ್ಸ್ ಗೆ ಒತ್ತಾಯ ಮಾಡುತ್ತಿದ್ದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ತಮ್ಮಣ್ಣ ಫಕೀರಪ್ಪ ಹಾದಿಮನಿ (52) ಇಂತಹ ನೀಚ ಕೃತ್ಯ ಎಸಗಿದ ಮುಖಪುಟ ವಿನ್ಯಾಸಗಾರ. ಈತ ಫೇಸ್ ಬುಕ್ ಮೂಲಕ ರೂಪದರ್ಶಿಯೊಬ್ಬಳನ್ನು ಪರಿಚಯಮಾಡಿಕೊಂಡು, ಬಳಿಕ ರೂಪದರ್ಶಿಗೆ ನಗ್ನ ಚಿತ್ರ ಕಳುಹಿಸುವ ಮೂಲಕ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದನು.
ಈತನ ಕಿರುಕುಳ ತಾಳಲಾರದೆ ರೂಪದರ್ಶಿ ಸೈಬರ್ ಕ್ರೈಂ ಪೋಲೀಸರಿಗೆ ದೂರು ನೀಡಿದ್ದಳು. ರೂಪದರ್ಶಿ ದೂರು ಆಧರಿಸಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬೆಳಗಾವಿಯ ಗೋಕಾಕ್ ಬಸ್ ನಿಲ್ದಾಣದ ಬಳಿ ಲಾಡ್ಜ್ ನಲ್ಲಿದ್ದ ವೇಳೆ ಆರೋಪಿಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.