ಸೇಂಟ್ ಮಾಲೋದ ಸಮುದ್ರ ಅಲೆಗಳ ವೈಭವ..!
ಜನರು ಸಮುದ್ರ ತೀರದಲ್ಲೊಂದು ಮನೆಯಿರಬೇಕು. ಹಗಲೂರಾತ್ರಿ ಸಮುದ್ರವನ್ನು ನೋಡುತ್ತಲೇ ಇರಬೇಕು ಎಂದು ಕನಸು ಕಾಣುತ್ತಾರೆ. ಆದರೆ ಸಮುದ್ರದ ಆಳೆತ್ತರದ ಅಲೆಗಳು ಮನೆಯನ್ನು ಸ್ಪರ್ಶಿಸುವಂತಿದ್ದರೆ ನಿರ್ಭಯವಾಗಿ ನಿಶ್ಚಿಂತೆಯಿಂದ ವಾಸಿಸಲು ಸಾಧ್ಯವಿಲ್ಲ.ಫ್ರಾನ್ಸ್ನ ಬಂದರು ನಗರ ಸೇಂಟ್ ಮಾಲೋಗೆ ಈಗ ಪ್ರವಾಸಿಗರ ದಂಡು ಭೇಟಿ ನೀಡುತ್ತಿದೆ..ಇದಕ್ಕೆ ಕಾರಣವೇನೆಂದರೆ, ಇದು ಬ್ರಿಟಾನಿ ಪ್ರದೇಶದಲ್ಲಿ ಮಧ್ಯಕಾಲೀನ ಯುಗದಲ್ಲಿ ರೂಪುಗೊಂಡ ಸುಂದರವಾದ ನಗರವಾಗಿದೆ. ಅದ್ಭುತ ಕಡಲತೀರ, ಕಾಲುವೆಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಈ ವಿಡಿಯೋದಲ್ಲಿ ಗಮನಿಸುವುದಾದ್ರೆ, ಈ ಬೃಹತ್ ಆಕಾರದ ಅಲೆಗಳು ಆಕರ್ಷಕ ಕಟ್ಟಡವನ್ನು ತಾಕಿ ಶಾಂತವಾಗುವುದನ್ನು ಕಾಣಬಹುದಾಗಿದೆ..ಅಲ್ಲದೇ, ಭಯಾನಕವೂ ಮತ್ತು ಸುಂದರವೂ ಇಲ್ಲಿ ಒಟ್ಟಿಗೇ ಮೇಳೈಸುತ್ತದೆ. ಅಲೆಗಳ ಈ ಏರಿಳಿತವನ್ನು ನೋಡುವುದೇ ರೋಮಾಂಚಕಾರಿ ಅನುಭವ. ಈ ದೃಶ್ಯವೈಭವ ನೋಡಲೆಂದೇ ಯುರೋಪಿನಾದ್ಯಂತ ಪ್ರವಾಸಿಗರು ಜಮಾಯಿಸುತ್ತಿದ್ದಾರೆ.