ಮುಸ್ಲಿಂ ಸಮುದಾಯದ ಯುವ ಜೋಡಿಯ ಮದುವೆಯೊಂದು ಆನ್ ಲೈನ್ ನಲ್ಲೇ ನಡೆದು ಗಮನ ಸೆಳೆದಿದೆ.
ವರ ಇಮ್ರಾನ್ ಜೊತೆಯಲ್ಲಿ ವಧು ತಾಜ್ಮಾ ಬೇಗಂ ವಿವಾಹ ಮಹೋತ್ಸವ ನೆರವೇರಿದೆ.
ಧಾರವಾಡ ಜಿಲ್ಲೆಯಲ್ಲಿ ವರನಿದ್ದರೆ, ವಧು ಕೊಪ್ಪಳ ಜಿಲ್ಲೆಯಲ್ಲಿದ್ದರು. ಆನ್ ಲೈನ್ ನಲ್ಲಿ ವಿಡಿಯೋ ಕಾಲ್ ಮಾಡಿ ಮದುವೆ ಕಾರ್ಯವನ್ನು ನೆರವೇರಿಸಲಾಗಿದೆ.
ಇವರಿಬ್ಬರ ಮದುವೆಗೆ ಎರಡ್ಮೂರು ತಿಂಗಳಿಂದ ಸಿದ್ಧತೆಗಳು ನಡೆದಿದ್ದವು. ಆದರೆ ಲಾಕ್ ಡೌನ್ ಪರಿಣಾಮ ತುಸು ಗೊಂದಲಕ್ಕೆ ಒಳಗಾಗಿದ್ದರು. ಇದೀಗ ಆನ್ ಲೈನ್ ನಲ್ಲಿ ಮದುವೆ ಮಾಡಿದ್ದು, ಲಾಕ್ ಡೌನ್ ತೆರವಾದ ಬಳಿಕ ಆರತಕ್ಷತೆ ನಡೆಯಲಿದೆ.