ನಗರದಲ್ಲಿ ಹೆಚ್ಚಾಯ್ತು ನಕಲಿ ಅಂಕಪಟ್ಟಿಯ ಹಾವಳಿ

ಗುರುವಾರ, 25 ಆಗಸ್ಟ್ 2022 (14:01 IST)
ರಾಜ್ಯದಲ್ಲಿ ನಕಲಿ ಅಂಕಪಟ್ಟಿಗಳ ಹಾವಳಿ ಹೆಚ್ಚಾಗಿದೆ. ಅಸಲಿ ಅಂಕಪಟ್ಟಿಗೆ ಸೆಡ್ಡು ಹೊಡೆವ ರೀತಿಯಲ್ಲಿ ನಕಲಿ ಅಂಕಪಟ್ಟಿ ರೆಡಿ ಮಾಡಿಕೊಡ್ತಿದ್ದ ವಂಚಕರ ಜಾಲವನ್ನು ಶೇಷಾದ್ರಿಪುರಂ ಪೊಲೀಸ್ ಬಂಧಿಸಿದ್ದಾರೆ.  ಇನ್ಸ್ಪೆಕ್ಟರ್ ರವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ.
 
ಅಯೂಬ್ ಪಾಷಾ ಅಲಿಯಾಸ್ ಅಯೂಬ್ ಹಾಗು ಖಲೀಲ್ ಉಲ್ಲಾಬೇಗ್ ಅಲಿಯಾಸ್ ಖಲೀಲ್ ಬಂಧಿತ ಆರೋಪಿಗಳು. 
ಈ ವಂಚಕರ ಗ್ಯಾಂಗ್ ಅನ್ನು  ಸಂಪರ್ಕ ಮಾಡಿದ್ರೆ ಸಾಕು ಯಾವೂದೇ ಡಿಗ್ರಿ ಮಾರ್ಕ್ಸ್ ಕಾರ್ಡ್ ಬೇಕಾದ್ರು ರೆಡಿ ಮಾಡಿ ಕೊಡುತ್ತಿದ್ದರು.
 
 ಫೇಕ್ ಮಾರ್ಕ್ ಕಾರ್ಡ್ ತಯಾರು ಮಾಡಿ ಕೊಡ್ತಿದಾರೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ಶೇಷಾದ್ರಿಪುರಂನ ಮನೆಯೊಂದರ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಒಂದು ಕ್ಷಣ ಪೊಲೀಸರಿಗೂ ಅವಾಕ್ಕಾಗಿದ್ದರು. ಯಾಕೆಂದರೆ  ಅಲ್ಲಿ ಅಸಲಿ ಮಾರ್ಕ್ ಕಾರ್ಡ್ ಗಳಿಗೆ ಸೆಡ್ಡು ಹೊಡೆಯೋ ರೀತಿಯಲ್ಲಿ 38 ಮಾರ್ಕ್ಸ್ ಕಾರ್ಡ್ ಗಳು ಸಿಕ್ಕಿದ್ದವು. . 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ