ಬೀದಿಗೆ ಬಂತು ಸಚಿವರ ಕಿತ್ತಾಟ

ಶುಕ್ರವಾರ, 18 ಮಾರ್ಚ್ 2022 (17:00 IST)
ರಾಮನಗರ ತಹಸೀಲ್ದಾರ್ ವರ್ಗಾವಣೆ ವಿಷಯವಾಗಿ ಸಚಿವರ ನಡುವೆ ಕಚ್ಚಾಟ ನಡೆದಿದೆ ಎಂಬುದರ ಬಗ್ಗೆ ಸಚಿವ ಅಶ್ವಥ್ ನಾರಾಯಣ ಸ್ಪಷ್ಟೀಕರಣ ನೀಡಿದ್ದಾರೆ.
 
ಈ ಕುರಿತು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಆರ್.ಅಶೋಕ್ ಹಾಗೂ ನನ್ನ ನಡುವೆ ಜಸ್ಟ್ ಮಾತುಕತೆ ನಡೆದಿದೆ.
ರಾಮನಗರ, ಮಾಗಡಿಯಲ್ಲಿ ಯಾರನ್ನು ಪೋಸ್ಟಿಂಗ್ ಮಾಡುವ ವಿಚಾರದಲ್ಲಿ ಕೋರಿಕೆಯಾಗಿತ್ತು. ಕಂದಾಯ ಸಚಿವರು ಇದನ್ನ ಪರಿಗಣಿಸಿ ನೋಡ್ತೀವಿ ಎಂದು ಹೇಳಿದ್ದಾರೆ. ಅದು ಅವರ ಇಲಾಖೆಗೆ ಬಿಟ್ಟಿದ್ದು, ಮಾಡ್ತೀವಿ ಅಂತ ಹೇಳಿದ್ದಾರೆ ನೋಡೋಣ ಎಂದು ತಿಳಿಸಿದರು.
 
ನಿಮ್ಮ ಮಾತಿಗೆ ಬೆಲೆ ಇಲ್ಲ ಎಂದು ನಿಮ್ಮ ಪಕ್ಷದವರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಯಾಯಾ ಇಲಾಖೆಗಳು ಇತಿಮಿತಿಗಳಲ್ಲಿ ಕೆಲಸ ಮಾಡ್ತಾ ಇರುತ್ತಾರೆ. ನಮಗೆ ಬೇಡಿಕೆ ಇರುತ್ತೆ, ನಮಗೆ ಈ ರೀತಿ ಬದಲಾವಣೆಗಳು ಆಗಬೇಕೆಂಬ ಒತ್ತಾಯ, ಆಸೆ ಇರುತ್ತೆ. ಆ ಒತ್ತಾಯಗಳನ್ನ ಸಂಬಂಧಪಟ್ಟ ಇಲಾಖಾ ಸಚಿವರಿಗೆ ತಿಳಿಸುತ್ತೇವೆ. ಅವರು ಪರಿಸ್ಥಿತಿಗೆ ಅನುಗುಣವಾಗಿ ಸಹಾಯ ಮಾಡ್ತಾರೆ, ಇಲ್ಲ ಅಂದ್ರೆ ಇಲ್ಲ‌ ಅಂತ ಹೇಳ್ತಾರೆ. ಅವರು ಅವರ ಇಲಾಖೆಗಳ ನಿರ್ಧಾರಗಳನ್ನ ತೆಗೆದುಕೊಳ್ತಾರೆ, ನಮ್ಮದು ಒತ್ತಾಯ ಇರುತ್ತೆ. ನಮ್ಮ ಒತ್ತಾಯವನ್ನ ಪರಿಗಣಿಸಬೇಕು ಅಂತೇನಿಲ್ಲ, ಅದು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.
 
ಸಚಿವ ಅಶೋಕ್ ಹಾಗೂ ನಾವಿಬ್ಬರು ಒಂದೇ ಪಕ್ಷದಲ್ಲಿರುವವರು. ಸಹೋದರರ ರೀತಿ ಇರಬೇಕು. ಪ್ರೀತಿ ಇರಬೇಕು. ವ್ಯತ್ಯಾಸ ಬರುತ್ತೆ.. ಅದನ್ನ ಅಲ್ಲೇ ಬಿಡಬೇಕು. ನಾವೆಲ್ಲರೂ ಬಂದಿರೋದು ಜನರ ಪರವಾಗಿ. ನಮ್ಮ ಪ್ರತಿಷ್ಠೆಗಳನ್ನ ಹೆಚ್ಚಿಸ್ತಾಕೊಳ್ತಾ ಹೋದ್ರೆ ಯಾವುದೇ ಒಳ್ಳೆಯ ಉದ್ದೇಶಗಳಿಗೆ ಪೂರಕವಾಗಿರಲ್ಲ. ನಮ್ಮ ಪ್ರತಿಷ್ಠೆಗಳನ್ನ ಬಿಡಲೇಬೇಕಾಗುತ್ತದೆ
ನಾವು ಒಟ್ಟಿಗೆ ಕೆಲಸ ಮಾಡಬೇಕು, ಒಗ್ಗಟ್ಟಿನಿಂದ ಇರಬೇಕಾಗುತ್ತದೆ. ಒಂದು ಪಕ್ಷದಲ್ಲಿ ಇರುವವರು ಪರಸ್ಪರ ಪ್ರೀತಿ, ಗೌರವ ಇರಬೇಕು. ವ್ಯತ್ಯಾಸಗಳು ಬರ್ತಾವೆ, ಹೋಗ್ತಾವೆ, ಅದನ್ನೇ ಹೆಚ್ಚಾಗಿ ಒತ್ತು ಕೊಡುವ ಪ್ರಶ್ನೆಯೇ ಇಲ್ಲ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
 
ಇನ್ನು ವಿಧಾನ ಸಭೆಯಲ್ಲಿ ರಾಮನಗರ ತಹಸೀಲ್ದಾರ್ ವರ್ಗಾವಣೆ ಮಾಡುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಆರ್ ಅಶೋಕ ಮತ್ತು ಅಶ್ವಥ್ ನಾರಾಯಣ್ ಕಚ್ಚಾಡಲಿಲ್ಲ. ಯಾವುದೇ ಘಟನೆ ನಡೆಯಲಿಲ್ಲ. ಸಂಘರ್ಷ ಇರಲಿಲ್ಲ ಸಾಮರಸ್ಯದಿಂದ ಮಾತಾಡಿದ್ರು ಎಂದು ರೇಣುಕಾಚಾರ್ಯ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ