ಅಪ್ಪು ಅಗಲಿದ ಬಳಿಕ ಮೊದಲ ಹುಟ್ಟುಹಬ್ಬ ಆಚರಣೆ ಜೋರಾಗೆ ನಡೆಯಿತು. ಕಂಠೀರವ ಸ್ಟುಡಿಯೋದಲ್ಲಿ ಹುಟ್ಟಿದ ಹಬ್ಬದ ಸಂಭ್ರಮ,ಅಗಲಿದ ನೋವು ಎರಡು ಕಂಡು ಬಂತು..!
ಅಭಿಮಾನಿಗಳ ಪಾಲಿನ ಆರಾದ್ಯ ದೈವ, ನಗುಮೋಗದ ಯುವರಾಜ,ಪವರ್ ಸ್ಟಾರ್ ಪುನೀತ್ ಅಗಲಿದ ಬಳಿಕ ಇದು ಮೊದಲ ಹುಟ್ಟು ಹಬ್ಬ. ಹೀಗಾಗಿ ಮದ್ಯರಾತ್ರಿ ರಾಘವೇಂದ್ರ ರಾಜ್ ಕುಮಾರ್ ಪುನೀತ್ ಸಮಾಧಿ ಬಳಿ ಕೇಕ್ ಕಟ್ ಮಾಡುದರ ಮೂಲಕ ಆಚರಿಸಿದ್ರು. ಬೆಳಿಗ್ಗೆ ಪುನೀತ್ ಪತ್ನಿ ಅಶ್ವಿನಿ ಅಪ್ಪು ಸಮಾಧಿಗೆ ಪುಷ್ಪನಮನ ಸಲ್ಲಿಸಿ ತಮ್ಮ ಮನೆ ದೇವ್ರಿಗೆ ಶುಭ ಹಾರೈಸಿದ್ರು. ನಟ ಚೇತನ್ ಹಾಗೇ ಶ್ರಿ ಮುರುಳಿ ಅಪ್ಪು ಸಮಾಧಿ ಭೇಟಿ ನೀಡಿ ತನ್ನ ಪ್ರೀತಿಯ ಮಾವನಿಗೆ ವಂದನೆ ಅರ್ಪಿಸಿದ್ರು. ಹಾಗೇ ಅಭಿಮಾನಿಗಳು ತೋರುತ್ತಿರೋ ಪ್ರೀತಿ ನೋಡಿ ಈ ಸಂದರ್ಭ ಮಾವ ಇರ್ಬೇಕಿತ್ತು ಅಂತ ಹೇಳಿ ಭಾವುಕರಾದ್ರು.
ನಮ್ಮ ಕುಟುಂಬದ ಅಣ್ಣನೋ ತಮ್ಮನೋ ಎಂಬಂತೆ ಸಾವಿರಾರು ಜನ ಅಪ್ಪು ಸಮಾಧಿ ದರ್ಶನ ಪಡೆದು ಹುಟ್ಟು ಹಬ್ಬದ ಶುಭ ಹಾರೈಸಿದ್ರು. ಮತ್ತೆ ಬರ್ತಿನಿ ಅಮ್ಮ ಅಂತ ಹೇಳಿ ಹೋದ ಮಗ ಮರಳಿ ಬಾರದಂತೆ, ಕೆಲಸಕ್ಕೆ ಹೋದ ಅಣ್ಣ ಮತ್ತೆ ಬರದ ಸತ್ತು ಹೋದಾಗ ಆಗುತ್ತದೆಯಲ್ಲ, ಅದೇ ತರದ ಸಂಕಟ ನೋವು ಇಂದು ಅಪ್ಪು ಅಭಿಮಾನಿಗಳನ್ನ ಕರಗಿ ಕಣ್ಣೀರು ಹಾಕಿಸಿತ್ತು.ಅಪ್ಪು ಅಲ್ಲಿ ಯಾರ ಅಣ್ಣನಲ್ಲ, ತಮ್ಮನೂ ಅಲ್ಲ, ಸಂಬಂಧಿಯೂ ಅಲ್ಲವೇ ಅಲ್ಲ. ಆದ್ರೂ ಅಲ್ಲಿ ಬಂದಿದ್ದವರಿಗೆಲ್ಲ ಅಪ್ಪು ಮನೆ ಮಗನೇ ಆಗಿಹೋಗಿದ್ದರು. ಹುಟ್ಟು ಹಬ್ಬದ ಸಂಭ್ರಮದಲ್ಲಿ ಅಪ್ಪು ನಮ್ಮೊಂದಿಗಿಲ್ಲವಲ್ಲ ಅಂತ ನೋವು ಅಭಿಮಾನಿಗಳು ಕಣ್ಣೀರಿಗೆ ಕಾರಣವಾಯ್ತು.
ಬೆಳಿಗ್ಗೆ 5 ಗಂಟೆಯಿಂದಲೇ ಅಭಿಮಾನಿಗಳು ಅಪ್ಪು ಸಮಾಧಿ ದರ್ಶನ ಪಡೆಯಲು ಕ್ಯೂ ನಿಂತಿದ್ದರು. ಸಾವಿರಾರು ಜನ ಅಪ್ಪು ಸಮಾಧಿ ಬಳಿ ಗುಲಾಭಿ ಹೂವಿಟ್ಟು ಅಭಿಮಾನಿ ಮೇರೆದ್ರು.ಕೋಲಾರದಿಂದ ಬಂದ ಅಪ್ಪು ಅಭಿಮಾನಿ ಗಣೇಶ್ ಬೈಕ್ ಗೆ ಅಪ್ಪು ಭಾವಚಿತ್ರ ಇಟ್ಟು ಅಲಂಕಾರ ಮಾಡಿ ಸಮಾಧಿಬಳಿ ಬಂದಿದ್ರು.
ಅಪ್ಪು ಸಮಾಧಿ ಬಳಿ ಅಭಿಮಾನಿಗಳಿಂದ ಅಪ್ಪುರನ್ನ ನೆನೆದು ಭಜನೆ ಮಾಡಲಾಯ್ತು.
ಅಪ್ಪು ಇಲ್ಲದನ್ನ ನೆನೆದು ಹಾಡಿನ ಮೂಲಕ ನೋವು ವ್ಯಕ್ತಪಡಿಸುತ್ತಿರೋದು ಉಳಿದ ಅಭಿಮಾನಿಗಳಿಗೆ ಕಣ್ಣೀರು ತರಿಸುವಂತಿತ್ತು.
ಇಂದು ವಿಭಿನ್ನ ಅಂದ್ರೆ ಆಗನದಲ್ಲೂ ಅಪ್ಪು ಹೆಸರು ರಾರಾಜಿಸಿತು. ಕಂಠೀರವ ಸ್ಟುಡಿಯೋ ಮೇಲಿನ ಆಕಾಶದಲ್ಲಿ ಜೆಟ್ ವಿಮಾನದ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಯ್ತು.ಹ್ಯಾಪಿ ಬರ್ತಡೆ ಪವರ್ ಸ್ಟಾರ್ ಎಂಬ ಪೋಸ್ಟರ್ ಮೂಲಕ ಶುಭ ಕೋರಿದ್ದಕ್ಕೆ ಅಭಿಮಾನಿಗಳು ಖುಷಿಪಟ್ಟರು.ಅಪ್ಪು ಹುಟ್ಟಿ ಬರಲಿ ಅಂತ ಅಭಿಮಾನಿ ಭೀಮರಾವ್ ಪೀಣ್ಯದಿಂದ ದೀರ್ಘ ದಂಡ ನಮಸ್ಕಾರ ಹಾಕಿಕೊಂಡು ಸಮಾಧಿ ಬಳಿ ಬಂದರು. ಅಪ್ಪುವನ್ನು ದೇವರಂತೆ ಪೂಜಿಸುವರಿದ್ದಾರೆ. ಸಾಮಾನ್ಯವಾಗಿ ಪೂಜಾ ಕುಣಿತದಲ್ಲಿ ದೇವರನ್ನ ತಲೆ ಮೇಲೆ ಹೊತ್ತು ಕುಣಿಯುತ್ತಾರೆ