ಕೈ ಕಾಲು ಕಟ್ಟಿ ಹೆತ್ತ ಮಕ್ಕಳನ್ನೇ ಕೊಲೆ ಮಾಡಿದ ಪಾಪಿ ತಾಯಿ
ಮಕ್ಕಳಿಬ್ಬರಿಗೆ ಕೈ ಕಾಲು ಕಟ್ಟಿದ ಪಾಪಿ ತಾಯಿಯೊಬ್ಬಳು ಅವರನ್ನು ಕೊಲೆ ಮಾಡಿ ಕೊನೆಗೂ ಮಾಡಬಾರದ್ದನ್ನು ಮಾಡಿಕೊಂಡಿದ್ದಾಳೆ.
ಮಂಡ್ಯದ ಮದ್ದೂರು ಕೆ.ಹಾಗಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ಸುಂದರ್ ಎಂಬುವರ ಪತ್ನಿ ಸುನೀತಾ (29) ಮತ್ತು ತರುಣ್ ಗೌಡ (6), ತೇಜಶ್ರೀ (5) ವರ್ಷದ ಹೆಣ್ಣು ಮಗು ಸಾವಿಗೆ ಶರಣಾಗಿದ್ದಾರೆ.
ಮನೆಯಲ್ಲಿ ಮೊದಲು ಮಕ್ಕಳಿಗೆ ಕೈ ಕಾಲು ಕಟ್ಟಿ ನೇಣು ಬಿಗಿದು ನಂತರ ತಾಯಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮದ್ದೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.