ಮಗಳನ್ನು ಕೊಂದ ತಾಯಿ ಆತ್ಮಹತ್ಯೆ ಕೇಸ್: ಪತಿ ಅರೆಸ್ಟ್

ಬುಧವಾರ, 7 ಆಗಸ್ಟ್ 2019 (13:53 IST)
ವಿಡಿಯೋ ಮಾಡಿ ತನ್ನ ಮಗಳನ್ನ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗಂಡನನ್ನ ಬಂಧನ ಮಾಡಿದ್ದಾರೆ.

ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಆರೋಪಿ ಪಂಕಜ್ ನನ್ನ ಬಂಧನ ಮಾಡಿದ್ದಾರೆ.

ಮಾಡೆಲ್ ಆಗಿದ್ದ ಜ್ಯೋತಿ ತನ್ನ ಮಗಳನ್ನು ಕೊಂದು ನಂತರ ತಾನೂ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಆದರೆ ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಗಂಡನ ಕಿರುಕುಳ ಬಗ್ಗೆ ಹೇಳಿಕೊಂಡಿದ್ದಳು. ಮೃತಳ ಸಹೋದರ ಠಾಣೆಗೆ ದೂರು ನೀಡಿದ್ರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ