ಕಾವೇಗಿ ಕೂಗಿಗೆ ಬೆಂಬಲ ಬೇಕು ಅಂದ ಸಂಸದೆ

ಸೋಮವಾರ, 9 ಸೆಪ್ಟಂಬರ್ 2019 (16:29 IST)
ಮಂಡ್ಯ ಜಿಲ್ಲೆ ಅಂದರೆ ಅದ್ರಲ್ಲಿ ವಿಶೇಷತೆ ಇದೆ, ಸದ್ಗುರುಗಳು ಆರಂಭಿಸಿರುವ ಈ ಕಾವೇರಿ ಕೂಗು ಅಭಿಯಾನಕ್ಕೆ ಮಂಡ್ಯ ಜನ ಸ್ಪಂದಿಸಬೇಕು. ಹೀಗಂತ ಪಕ್ಷೇತರ ಸಂಸದೆ ಹೇಳಿದ್ದಾರೆ.

ಕಾವೇರಿ ನದಿ ನಮ್ಮೆಲ್ಲರ ತಾಯಿ,  ಅವಳನ್ನು ಪೋಷಣೆ ಮಾಡಬೇಕಾದ ಜವಾಬ್ದಾರಿ ಮಂಡ್ಯ ಜನರ ಮೇಲಿದೆ. ಹೀಗಾಗಿ ನಾವುಗಳು ಕೂಡ ಈ  ಕಾರ್ಯಕ್ರಮ ಯಶಸ್ವಿಗೊಳಿಸಬೇಕು, ವೃಕ್ಷಗಳನ್ನ ನಾವು ರಕ್ಷಿಸಿದರೆ, ವೃಕ್ಷ ನಮ್ಮನ್ನು ರಕ್ಷಣೆ ಮಾಡುತ್ತವೆ. ಮುಂದಿನ‌ ಪೀಳಿಗೆಗೆ ನಾವು ಹೆಚ್ಚೆಚ್ಚು ಗಿಡ ನೆಟ್ಟು ಕಾವೇರಿ ನದಿಯನ್ನು ರಕ್ಷಣೆ ಮಾಡಬೇಕಿದೆ.
ಮಂಡ್ಯದ ಬಗ್ಗೆ ಇಂಡಿಯಾನೆ ಮಾತಾಡುತ್ತೆ.

ನನ್ನನ್ನ ಸಂಸತ್ತಿನಲ್ಲಿ, ದೆಹಲಿಯಲ್ಲಿ ಯಾವ ಪಾರ್ಟಿ ನೀವು ಅಂತಾ ಕೇಳ್ತಾರೆ. ನಾನು ಪಕ್ಷೇತರ ಸಂಸದೆ ಅಂತೇಳ್ತೀನಿ ಹಾಗಾದ್ರೆ ಯಾವ ಕ್ಷೇತ್ರ ನಿಮ್ಮದು ಅಂತಾರೆ. ಮಂಡ್ಯದ ಸಂಸದೆ ಅಂತಾ ಹೆಮ್ಮೆಯಿಂದ ಹೇಳ್ತೀನಿ. ಆಗ ಎಲ್ಲರೂ ಕೈ ಮುಗಿದು ನಮಸ್ಕರಿಸ್ತಾರೆ. ಮಂಡ್ಯದ ಜನ ಮಹಿಳೆಯನ್ನ ಪಕ್ಷೇತರವಾಗಿ ಆಯ್ಕೆ ಮಾಡಿದ್ದಾರೆ ಅಂತ ಹೆಮ್ಮೆ ಪಡ್ತಾರೆ. ಇದು ನಮ್ಮ ಮಂಡ್ಯದ ಸಂಸ್ಕೃತಿ. ಹೀಗಂತ ಸಂಸದೆ ಸುಮಲತಾ ಹೇಳಿದ್ದಾರೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ