ಕಾವೇರಿ ಕೂಗಿಗೆ ಧ್ವನಿಯಾದ ರಾಕಿಂಗ್ ಸ್ಟಾರ್ ಯಶ್

ಮಂಗಳವಾರ, 27 ಆಗಸ್ಟ್ 2019 (09:45 IST)
ಬೆಂಗಳೂರು: ಸದ್ಗುರು ಕನಸಿನ ಕೂಸಾದ ಕಾವೇರಿ ಕೂಗು ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಕೈ ಜೋಡಿಸಿದ್ದಾರೆ. ಈಗಾಗಲೇ ಹಲವು ಸೆಲೆಬ್ರಿಟಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಈಗ ರಾಕಿಂಗ್ ಸ್ಟಾರ್ ಯಶ್ ಜತೆಯಾಗಿದ್ದಾರೆ.


ಕಾವೇರಿ ನಮ್ಮ ಜೀವನದಿ. ಇದು ಕೇವಲ ನದಿಯಲ್ಲ. ನಮ್ಮ ಜೀವನ. ಇದನ್ನು ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ ಎಂದು ರಾಕಿಂಗ್ ಸ್ಟಾರ್ ಯಶ್ ವಿಡಿಯೋ ಸಂದೇಶ ಮೂಲಕ ಹೇಳಿಕೊಂಡಿದ್ದಾರೆ.

ನಮ್ಮ ತಾಯಿ ಕಾವೇರಿ ಇಂದು ಕಷ್ಟದಲ್ಲಿದ್ದಾಳೆ. ಕಾವೇರಿ ತಾಯಿ ಬತ್ತಿ ಹೋಗುವ ಅಂಚಿಗೆ ತಲುಪಿದ್ದಾಳೆ. ಹಾಗಾಗಿ ನಮ್ಮ ತಾಯಿಯನ್ನು ಉಳಿಸಿಕೊಳ್ಳುವ ಕರ್ತವ್ಯ ನಮ್ಮದಾಗಿದೆ. ಇಂದು ಈಶಾ ಫೌಂಡೇಷನ್ ಇದನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಒಂದು ಗಿಡಕ್ಕೆ 42 ರೂ. ಬೆಲೆಯಾಗುತ್ತದೆ. ಕಾವೇರಿ ಕಾಲಿಂಗ್ ವೆಬ್ ಸೈಟ್ ಮೂಲಕ ಮೊತ್ತ ಪಾವತಿಸಿ ಒಂದೊಂದು ಗಿಡ ದೇಣಿಗೆ ನೀಡುವ ಮೂಲಕ ಕಾವೇರಿಯನ್ನು ಜೀವಂತವಾಗಿಡೋಣ ಎಂದು ಯಶ್ ಕರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ