ಹೊಸವರ್ಷದ ದಿನವೇ ಸಾಲದ ಶೂಲಕ್ಕೆ ಅನ್ನದಾತ ಬಲಿ

ಮಂಗಳವಾರ, 1 ಜನವರಿ 2019 (19:36 IST)
ಹೊಸವರ್ಷದ ದಿನವೇ ಸಾಲದ ಶೂಲಕ್ಕೆ ಅನ್ನದಾತ ಬಲಿಯಾದ ಘಟನೆ ನಡೆದಿದೆ.

ಸಾಲದ ಬಾಧೆಯಿಂದ  ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹನುಮಂತರಾಯ (54) ಮೃತ ದುರ್ದೈವಿ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಪ್ರಗತಿಕೃಷ್ಣ ಬ್ಯಾಂಕ್ ನಲ್ಲಿ 5 ಲಕ್ಷ ಸಾಲ, ಕೈಗಡ 8 ಲಕ್ಷ ಸಾಲದಿಂದ ಕಂಗೆಟ್ಟಿದ್ದನು. ಅಪಾರ ಲಾಭದ ನಿರೀಕ್ಷೆಯಿಂದ ತೆಂಗು, ಅಡಿಕೆ ಬೆಳೆಗೆ ಬಂಡವಾಳ ಹೂಡಿಕೆ ಮಾಡಿದ್ದನು.

ನೀರಿಲ್ಲದೇ ಬೆಳೆ ಕೈಕೊಟ್ಟ ಹಿನ್ನಲೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ