ಕೆಲಸದಿಂದ ತೆಗೆದದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ!

ಶನಿವಾರ, 29 ಡಿಸೆಂಬರ್ 2018 (16:52 IST)
ಏಕಾಏಕಿಯಾಗಿ ಕೆಲಸದಿಂದ ಕಿತ್ತುಹಾಕಿದ್ದರಿಂದ ಮನನೊಂದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿ, ಆ ಬಳಿಕ ಪ್ರತಿಭಟನೆಗೆ ಇಳಿದಿರುವ ಘಟನೆ ನಡೆದಿದೆ.

ಪ್ಯಾಂಟಲೂನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನ ಏಕಾಏಕಿ ಕೆಲಸದಿಂದ ತೆಗೆದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ಪ್ಯಾಂಟಲೂನ್ಸ್ ಮುಂದೆ ಮಹಿಳೆ ಹಾಗೂ ಕೆಲಸಗಾರದಿಂದ ಪ್ರತಿಭಟನೆ ನಡೆದಿದೆ.

ಸುಮತಿ ಎಂಬ ಮಹಿಳೆಯನ್ನ ಕೆಲಸದಿಂದ ತೆಗೆದಿರುವ ಮೇನೇಜರ್ ಕ್ರಮದ ವಿರುದ್ಧ ಕಳೆದ 6 ವರ್ಷಗಳಿಂದ ಕೆಲಸ‌ ನಿರ್ವಹಿಸುತ್ತಿರುವ ಸುಮತಿ ಎಂಬ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರಣ ಹೇಳದೆ‌ ಕೆಲಸದಿಂದ ತೆಗೆದಿದ್ದಕ್ಕೆ ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಸುಮತಿಯ ಕೆಲಸವನ್ನೆ ನಂಬಿಕೊಂಡು‌ ಇರುವ ಕುಟುಂಬ. ಕೆಲಸದಿಂದ ತೆಗೆದು ಹಾಕಿರುವುದಕ್ಕೆ ಕಾರಣ ಕೇಳಿ ಇಲ್ಲವಾದರೆ ನಾನು ಇಲ್ಲಿ ಸಾಯುತ್ತೇನೆ. ನಾವು ಇರುವ ಸ್ಥಳಕ್ಕೆ ಮೇನೇಜರ್ ಬರಬೇಕು. ಮೇನೇಜರ್ ಬರುವವರೆಗೆ ಮಳಿಗೆ ಬಾಗಿಲು ತೆರೆಯುವುದು ಬೇಡ ಎಂದು ಪಟ್ಟು ಹಿಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ