ಸಬೂಬು ಹೇಳುತ್ತಿರುವ ಅಧಿಕಾರಿಗಳು: ವೃದ್ಧಾಪ್ಯ ವೇತನಕ್ಕೆ ತಪ್ಪದ ಪರದಾಟ

ಶನಿವಾರ, 28 ಜುಲೈ 2018 (16:58 IST)
ಮೂರ್ನಾಲ್ಕು ತಿಂಗಳಿನಿಂದ ವೃದ್ಧಾಪ್ಯ ವೇತನವನ್ನು ನೀಡಿಲ್ಲ ಎಂದು ಬೆಳಿಗ್ಗೆಯಿಂದ ವೃದ್ಧರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾಲುಗಟ್ಟಿ ಕುಳಿತಿದ್ದಾರೆ.

ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ವಾರಗಟ್ಟಲೇ  ಅಲೆಯುತ್ತಿರುವ ವೃದ್ಧರು,  ಬೆಳಿಗ್ಗೆಯಿಂದ  ಅಪರ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಲುಗಟ್ಟಿ ಕುಳಿತಿದ್ರು. ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮದ 35 ಕ್ಕೂ ಹೆಚ್ಚು ಮಂದಿ ವಯೋವೃದ್ಧರು ವೃದ್ಧಾಪ್ಯ ವೇತನಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾರೆ.

ಇದುವರೆಗೆ ವೃದ್ಧಾಪ್ಯ ವೇತನವನ್ನು ಮನೆಗೆ ತಲುಪಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದರಿಂದ ಇವರಿಗೆ ಒಎಪಿ ಕೊಡುವವರೇ ಇಲ್ಲದಂತಾಗಿದೆ. ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದ್ರೆ ವೃದ್ಧಾಪ್ಯ ವೇತನವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ನೀಡಲಾಗುತ್ತಿದ್ದು, ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆದ್ರೆ ಬಾಕಿ ಹಣವನ್ನೆಲ್ಲಾ ಕೂಡಲೇ ನೀಡಲಾಗುವುದು ಎಂಬ ಉತ್ತರ ಕೊಡುತ್ತಿದ್ದಾರೆ. ಸರ್ಕಾರ ಕೊಡುವ ಅಲ್ಪಸ್ವಲ್ಪ ಹಣ ನೀಡಲೂ ಅಧಿಕಾರಿಗಳು ದಿನಕ್ಕೊಂದು ಸಬೂಬು ಹೇಳುತ್ತಿರುವುದಕ್ಕೆ ಹಿರಿಯ ಜೀವಗಳು ಶಪಿಸುತ್ತಿದ್ದಾರೆ.





ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ