ಚಿಕ್ಕಬಳ್ಳಾಫುರ : ಕರ್ನಾಟಕ ಹಾಗೂ ವಿವಿಧ ರಾಜ್ಯಗಳ ಟೊಮೆಟೊ ಬೆಳೆಗಾರರು ಈ ವರ್ಷ ಭಾರಿ ಲಾಭ ಗಳಿಸಿದ ಬಗ್ಗೆ ಹಲವಾರು ಮಾಧ್ಯಮ ವರದಿಗಳನ್ನು ನೀವು ನೋಡಿರಬಹುದು.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಚಿನ್ನದ ಅಂಗಡಿ ಮಾಲೀಕರೊಬ್ಬರಿಗೂ ಈ ಬಾರಿ ಕೈಹಿಡಿದಿದ್ದು ಟೊಮೆಟೊ ಬೆಳೆ ಎಂದರೆ ನೀವು ನಂಬಲೇಬೇಕು! ಹೌದು, ಚಿಂತಾಮಣಿಯ ನಕ್ಷತ್ರಾ ಚಿನ್ನದ ಅಂಗಡಿ ಮಾಲೀಕ ಚಂದ್ರಶೇಖರ್ ಈ ಬಾರಿ ಟೊಮೆಟೊ ಕೂಡ ಬೆಳೆದಿದ್ದರು. ಪರಿಣಾಮವಾಗಿ ಚಿನ್ನದ ವ್ಯವಹಾರ ಕೈಕೊಟ್ಟರೂ ಟೊಮೆಟೊ ಬೆಳೆ ಮಾರಾಟ ಮಾಡುವ ಮೂಲಕ ಅವರು ಲಾಭ ಗಳಿಸಿದ್ದಾರೆ.
ಚಂದ್ರಶೇಖರ್ ಅವರು ಟೊಮೆಟೊ ಮಾರಾಟ ಮಾಡಿ ಈಗಾಗಲೇ 45 ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ. ಇನ್ನೂ 15-20 ಲಕ್ಷ ರೂಪಾಯಿ ಲಾಭದ ನರೀಕ್ಷೆಯಲ್ಲಿದ್ದಾರೆ. 15 ಕಿಲೋ ಟೊಮೆಟೊ ಬಾಕ್ಸ್ ಅನ್ನು ಅವರು 2100 ರೂಪಾಯಿಯಂತೆ ಮಾರಾಟ ಮಾಡಿದ್ದಾರೆ. ಚಂದ್ರಶೇಖರ್ ಅವರು ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದರು.
ಈ ಮಧ್ಯೆ, ಚಿಂತಾಮಣಿಯಲ್ಲಿ 15 ಕೆಜೆಯ ಕ್ರೇಟ್ನ ಟೊಮೆಟೊ 2300 ರೂಪಾಯಿಗೆ ಹರಾಜಾಗಿದೆ. ಚಿಂತಾಮಣಿ ನಗರದ ಎಪಿಎಂಸಿಯ ಟೊಮೆಟೊ ಮಾರುಕಟ್ಟೆಯಲ್ಲಿ ಭರ್ಜರಿ ಮೊತ್ತಕ್ಕೆ ಟೊಮೆಟೊ ಮಾರಾಟವಾಗಿದೆ.