ಕಟಾವಿಗೆ ಬಂದಿದ್ದ ಭತ್ತ ಮಣ್ಣುಪಾಲು

ಬುಧವಾರ, 22 ಮೇ 2019 (14:25 IST)
ಆಲೆಕಲ್ಲು ಮಳೆಗೆ ನೆಲಕಚ್ಚಿದ ಭತ್ತದಿಂದಾಗಿ ರಾಜ್ಯದ ಭತ್ತದ ಬೆಳೆಗಾರರು ಈ ಬಾರಿಯೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಕಟಾವಿಗೆ ಬಂದ ಭತ್ತದ ಬೆಳೆ ಮಣ್ಣು ಪಾಲಾಗಿದೆ. ಮಳೆಯಿಂದ ಆಗಿರುವ ಹಾನಿಗೆ ಕಂಗಾಲಾದ ರೈತರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ನೂರಾರು ಎಕರೆ ಪ್ರದೇಶದಲ್ಲಿ ಭತ್ತ ನಾಶವಾಗಿದೆ.

ಹತ್ತಕ್ಕೂ ಹೆಚ್ಚು ಕಡೆ ನೆಲಕ್ಕೆ ಉರುಳಿವೆ ಮರಗಳು. 60 ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ.

ದಾವಣಗೆರೆ ಜಿಲ್ಲೆಯ  ಹರಿಹರ ತಾಲೂಕಿನಲ್ಲಿ ನ ಬನ್ನಿಕೊಡು, ಬೇವಿನಹಳ್ಳಿ ಹಾಗೂ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ, ಬಾಗಳಿ ಗ್ರಾಮಗಳಲ್ಲಿ ಭಾರೀ ಹಾನಿಯಾಗಿದೆ. ಮರ ತೆರವು ಗೊಳಿಸದ ಹಿನ್ನೆಲೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಕಂದಾಯ ಅಧಿಕಾರಿಗಳು ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ