ಜೇಡಿ ಮಣ್ಣಿನ ಮಳೆರಾಯನಿಗೆ ಮಾಡಿದ್ದೇನು?
ಬುಧವಾರ, 8 ಮೇ 2019 (20:18 IST)
ಮಳೆ ಇಲ್ಲದ ಕಂಗೆಟ್ಟ ಜನರ ಮಳೆಗಾಗಿ ಜೇಡಿ ಮಣ್ಣಿನ ಮಳೆರಾಯನನ್ನು ಮಾಡಿದ್ದಾರೆ.
ಬಾರೋ ಬಾರೋ ಮಳೆರಾಯ ಎಂದು ಪ್ರಾರ್ಥಿಸಿರುವ ಜನರು ಗುಬ್ಬಿ ತಾಲ್ಲೂಕಿನಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ
ಮಳೆರಾಯನಿಗೆ ಪಾರ್ಥನೆ ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಡುವಲ ಪಾಳ್ಯದಲ್ಲಿ ಆಚರಣೆ ನಡೆದಿದೆ. ಜೇಡಿ ಮಣ್ಣಿನ ಮಳೆರಾಯನಿಗೆ ಪೂಜೆ ಸಲ್ಲಿಸಿ, ನೀರಿನ ಅಭಿಷೇಕ ಮಾಡಲಾಗಿದೆ.
ಕಳೆದ ಮೂರು ದಿನದಿಂದ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ.
ಗ್ರಾಮದಲ್ಲಿ ಮಳೆರಾಯನ ಮೂರ್ತಿ ಮೆರವಣಿಗೆ ನಡೆಸಿ ಪ್ರಾರ್ಥನೆ ಮಾಡುತ್ತಿದ್ದಾರೆ ಜನರು. ಪ್ರಾರ್ಥನೆಯಿಂದ ಮಳೆ ಬರುತ್ತದೆ ಎಂಬ ಗ್ರಾಮಸ್ಥರ ನಂಬಿಕೆ ಬಲವಾಗಿದೆ.
ಮಳೆ ಯಿಲ್ಲದೆ ಕಂಗಾಲಾಗಿರುವ ರೈತರು, ವರ್ಷದ ಮೊದಲ ಮಳೆಯೇ ಬರದೆ ಇರೋದ್ರಿಂದ ಆತಂಕದಲ್ಲಿದ್ದಾರೆ.