ಸಿಎಂ ಬಗ್ಗೆ ಸಿದ್ರಾಮುಲ್ಲಾಖಾನ್ ಎಂದು ಸ್ಟೇಟಸ್ ಹಾಕಿದ ಪಿಡಿಒಗೆ ಇದೀಗ ಕಾನೂನು ಸಂಕಷ್ಟ
ಈ ಸಂಬಂಧ ಪೊಲೀಸರಿಗೆ ಸುಂಟನೂರ ಗ್ರಾಮದ ಮುಖಂಡ ಮಲ್ಲಿಕಾರ್ಜುನ ಡಣ್ಣೂರ ದೂರನ್ನು ನೀಡಿದ್ದರು.
ಗ್ರಾಮದ ಮುಖಂಡ ಮಹಾಲಿಂಗಪ್ಪ ಹರವಾಳ, ಆಳಂದ ತಾಲ್ಲೂಕು ಕುರುಬರ ಸಂಘದ ಯುವ ಘಟಕದ ಅಧ್ಯಕ್ಷ ಬೀರಣ್ಣಾ ಪೂಜಾರಿ ಅವರು ಪಿಡಿಒ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ದೂರು ಆಧರಿಸಿ ನಿಂಬರ್ಗಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.