ಸ್ಥಳಕ್ಕೆ ಕೆಆರ್‌ಎಸ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಭೀಕರ ಕೃತ್ಯಕ್ಕೆ ಕೆಆರ್‌ಎಸ್ ಗ್ರಾಮ ಬೆಚ್ಚಿಬಿದ್ದಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾವಾಗಿದೆ.
ಪತಿ ಗಂಗಾರಾಮ್ 10 ದಿನದ ಹಿಂದೆ ವ್ಯಾಪಾರಕ್ಕೆ ಹೋಗಿದ್ದರು. ಗಂಗಾರಾಮ್ ಪ್ಲಾಸ್ಟಿಕ್ ಹೂವು ಸೇರಿ ಹಲವು ವಸ್ತುಗಳ ಮಾರಾಟ ಮಾಡುತ್ತಿದ್ದರು. ಒಮ್ಮೆ ವ್ಯಾಪಾರಕ್ಕೆ ಹೋದರೆ 15 ದಿನ, 1 ತಿಂಗಳು ಬಿಟ್ಟು ಬರುತ್ತಿದ್ದರು. ಗಂಗಾರಾಮ್ ಅಣ್ಣ ಗಣೇಶ್ ಪತ್ನಿ ಚಂಪಾಡಿ ಸಹಾ ವ್ಯಾಪಾರಕ್ಕೆ ತೆರಳಿದ್ದರು. ಇವರೆಲ್ಲಾ ಒಟ್ಟಿಗೆ ವಾಸವಾಗಿದ್ದರು.
ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿಎನ್ ಯತೀಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್‌ಪಿ ಸಂದೇಶ್ ಕುಮಾರ್ ಸೇರಿ ಹಲವು ಹಿರಿಯ ಅಧಿಕಾರಿಗಳು ಇದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ಮಾಡಿದ್ದಾರೆ.