ತಡೆಗೋಡೆಯ ಗೇಟ್ ಒಡೆದು ಹಾಕಿದ ಪೈಲಟ್
ಡೆನ್ವರ್ನ ವಿಮಾನ ನಿಲ್ದಾಣದಲ್ಲಿ ಯುನೈಟೆಡ್ ಏರ್ಲೈನ್ಸ್ನ ಪೈಲಟ್ ಒಬ್ಬ ಪಾರ್ಕಿಂಗ್ ಸ್ಥಳದಲ್ಲಿದ್ದ ತಡೆಗೋಡೆಯ ಗೇಟ್ಗೆ ಕೊಡಲಿಯಿಂದ ಒಡೆದು ಸಿಕ್ಕಿಬಿದ್ದಿದ್ದಾನೆ. 63 ವರ್ಷದ ಕೆನ್ನತ್ ಹೆಂಡರ್ಸನ್ ಎನ್ನುವ ವ್ಯಕ್ತಿ ಕೊಡಲಿಯನ್ನು ಎತ್ತಿಕೊಂಡು ನಿರ್ಗಮನದ ಗೇಟ್ ಕಡೆ ತೆರಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಕೊಡಲಿಯಿಂದ ಪಾರ್ಕಿಂಗ್ ಗೇಟ್ಗೆ 20 ಬಾರಿ ಹೊಡೆದಿದ್ದು, ಪರಿಣಾಮ ಗೇಟ್ ಬಾಗಿಲು ಮುರಿದಿದೆ. ತಡೆಗೋಡೆಯ ಗೇಟ್ನ್ನು ಮುರಿದು ಸ್ಥಳದಿಂದ ಹೋಗಲು ಯತ್ನಿಸಿದಾಗ ಅಲ್ಲಿಯೇ ಇದ್ದ ಇನ್ನೊಬ್ಬ ಉದ್ಯೋಗಿ ಆತನಿಂದ ಕೊಡಲಿಯನ್ನು ತೆಗೆದುಕೊಂಡಿದ್ದಾನೆ. ನಂತರ ಆ ಪೈಲಟ್ನನ್ನ ಡೆನ್ವರ್ ಪೊಲೀಸರು ಹತ್ತಿರದ ಮೈದಾನದಲ್ಲಿ ವಶಕ್ಕೆ ಪಡೆದಿದ್ದಾರೆ.