ತರಬೇತಿ ವಿಮಾನ ಪಲ್ಟಿ, ಪೈಲಟ್‌ ಪಾರು

ಶುಕ್ರವಾರ, 10 ಫೆಬ್ರವರಿ 2023 (20:52 IST)
ಕೇರಳ ರಾಜ್ಯದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಪೈಲಟ್‌ ವಿದ್ಯಾರ್ಥಿಗಳ ತರಬೇತಿ ವಿಮಾನ ಪಲ್ಟಿ ಆಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.  ರಾಜೀವ್ ಗಾಂಧಿ ಅಕಾಡೆಮಿ ಫಾರ್ ಏವಿಯೇಷನ್ ಟೆಕ್ನಾಲಜಿಯ CESNA 172R ಹೆಸರಿನ ತರಬೇತಿ ವಿಮಾನ ಟೇಕಾಫ್ ಆಗುವ ಸಮಯದಲ್ಲಿ ಪತನಗೊಂಡಿದೆ. ಅದೃಷ್ಟವಶಾತ್, ವಿಮಾನದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ ಬೆಳಗ್ಗೆ 11:30ರ ಸುಮಾರಿಗೆ ರಾಜೀವ್ ಗಾಂಧಿ ಅಕಾಡೆಮಿ ಫಾರ್ ಏವಿಯೇಷನ್ ಟೆಕ್ನಾಲಜಿಯು ತರಬೇತಿ ವಿಮಾನ ಹಾರಾಟ ನಡೆಸಿತು. ತರಬೇತಿ ವೇಳೆ ಇಂಜಿನ್ ವೈಫಲ್ಯ ಕಂಡು ಬಂದ ಹಿನ್ನೆಲೆ ಈ ಘಟನೆ ನಡೆದಿದೆ. ಅತಿಯಾದ ವೇಗ ಇಲ್ಲದ ಕಾರಣ ಹಾಗೂ ವಿಮಾನದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು / ಶಿಕ್ಷಕರು ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಪಲ್ಟಿಯಾದ ನಂತರ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ