ಒಂದು ಕೆಜಿ ಬೆಳ್ಳುಳ್ಳಿಯ ಬೆಲೆ 380 ರೂಗೆ ಏರಿಕೆ
ದಿನದಿಂದ ದಿನಕ್ಕೆ ಬೆಳ್ಳುಳ್ಳಿಯ ಬೆಲೆ ಗಗನಕ್ಕೆ ಏರುತ್ತಿದ್ದು, ಸದ್ಯ 400ರ ಗಡಿ ಮುಟ್ಟಿದೆ. ಅಕಾಲಿಕ ಮಳೆಗೆ ಬೆಳೆ ಹಾನಿಯಾಗಿರುವ ಕಾರಣ ಸರಿಯಾದ ಬೆಳೆ ಬಾರದ ಪರಿಣಾಮ ಬೆಳ್ಳುಳಿಯ ಬೆಲೆ ಏರಿಕೆಯಾಗಿದೆ.
ಇಷ್ಟು ದಿನಗಳ ಕಾಲ ನಾಸಿಕ್ ನಿಂದ ಬೆಳ್ಳುಳ್ಳಿಯನ್ನ ರಫ್ತು ಮಾಡಿಕೊಳ್ಳಲಾಗುತ್ತಿತ್ತು. ಸದ್ಯ ಮಧ್ಯ ಪ್ರದೇಶ, ಗುಜರಾತ್, ರಾಜಸ್ತಾನ್ ನಿಂದ ಬೆಳ್ಳುಳ್ಳಿಯನ್ನ ರಫ್ತು ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸಾಗಾಣೆ ವೆಚ್ಚವನ್ನ ಹೇರಿಕೆ ಮಾಡುತ್ತಿದ್ದಾರೆ ಅಂತಾ ಮೂಲಗಳು ಹೇಳಿವೆ.