ಪೆಟ್ರೋಲ್, ಡೀಸೆಲ್ ದುಬಾರಿ: ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕಂಡಿರುವ ಬೆನ್ನಲ್ಲೇ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಏರಿಕೆ ಕಂಡುಬರುತ್ತಿದೆ.
ಇಂಧನ ಬೆಲೆ ಏರಿಕೆ ಆಗಿರುವ ಬೆನ್ನಲ್ಲೇ ಕಳೆದ ಎರಡ್ಮೂರು ದಿನಗಳಿಂದ ಜನರ ನಿತ್ಯ ಉಪಯೋಗಿ ವಸ್ತುಗಳ ಬೆಲೆಗಳಲ್ಲಿಯೂ ಕೂಡ ಏರಿಕೆ ಕಂಡುಬರುತ್ತಿದೆ. ಒಂದೆಡೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ದರ ಏರಿಕೆ ಕಾಣುತ್ತಿದ್ದರೆ, ಮತ್ತೊಂದೆಡೆ ಜನರಿಗೆ ನಿತ್ಯ ಬೇಕಾಗುವ ವಸ್ತುಗಳ ಬೆಲೆಯೂ ಹೆಚ್ಚಾಗುತ್ತಿದೆ. ಪರಿಣಾಮ ಬಡವರು ಹಾಗೂ ಮಧ್ಯಮ ವರ್ಗದವರು ಆರ್ಥಿಕವಾಗಿ ಮತ್ತಷ್ಟು ಹೈರಾಣಾಗುವಂತೆ ಮಾಡುತ್ತಿದೆ.
ದಿನಸಿ ಅಲ್ಲದೇ ತರಕಾರಿ ಬೆಲೆಗಳಲ್ಲಿಯೂ ಸಹ ಏರಿಕೆ ಕಂಡುಬರುತ್ತಿದೆ. ಇಂಧನ ಬೆಲೆ ಏರಿಕೆ ವಾಹನಗಳ ಸವಾರರು, ಮಾಲೀಕರಿಗೆ ಮಾತ್ರವಲ್ಲ ಜನಸಾಮಾನ್ಯರ ನಿದ್ದೆಗೆಡಿಸಿದೆ.