ನಿರಂತರ ಮಳೆಗೆ ತರಕಾರಿ-ಸೊಪ್ಪುಗಳ ಬೆಲೆ ಏರಿಕೆ..!

ಬುಧವಾರ, 14 ಸೆಪ್ಟಂಬರ್ 2022 (20:05 IST)
ರಾಜ್ಯದಲ್ಲಿ ನಿರಂತರವಾಗಿ ಮಳೆ‌ಸುರಿತಾ ಇದೆ. ಅತ್ತ ರೈತರು ಬೆಳೆದ ಬೆಳೆ ಪಸಲಿಗೆ ಬಂದು ಕಟಾವು ಮಾಡುವಷ್ಟರಲ್ಲೇ ಹೊಲ, ಗದ್ದೆಗಳಲ್ಲಿ ನಾಶವಾಗ್ತಿವೆ. ಇದ್ರಿಂದ ರಾಜಧಾನಿಗೆ ಆಮದಾಗ್ತಿದ್ದ ತರಕಾರಿ ಸೊಪ್ಪುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳ್ತಿದೆ.
 
 ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿತಾ ಇದೆ. ನಾನಾ ಅವಂತರವನ್ನ ಸೃಷ್ಟಿ ಮಾಡಿದೆ. ಬೆಂಗಳೂರಿನಲ್ಲಿಯೂ ಭಾರೀ ಮಳೆ ಬಂದು ಅವಾಂತರ ಸೃಷ್ಟಿಯಾಗಿದೆ. ಇನ್ನು ಸಿಲಿಕಾನ್ ಸಿಟಿಯ ಮಾರ್ಕೆಟ್ ಗಳಿಗೆ ಬೆಂಗಳೂರಿನ ಅಕ್ಕಪಕ್ಕದ ಜಿಲ್ಲೆಗಳಿಂದ ತರಕಾರಿ, ಸೊಪ್ಪು ಆಮದಾಗ್ತಿತ್ತು. ಆದ್ರೆ ಮಳೆಯಿಂದ ಸರಿಯಾಗಿ ರಾಜಧಾನಿಗೆ ತರಕಾರಿ ಪೂರೈಕೆ ಆಗ್ತಿಲ್ಲ. ಹೀಗಾಗಿ ಉತ್ತಮ ಗುಣಮಟ್ಟದ ತರಕಾರಿಗಳ ಬೆಲೆ ಮಾರ್ಕೆಟ್ ಗಳಲ್ಲಿ ಅಲಭ್ಯತೆ ಉಂಟಾಗಿದ್ದು, ದರದಲ್ಲೂ ಗಣನೀಯ ಏರಿಕೆ ಕಂಡಿದೆ.
 
 ಇನ್ನೂ ಯಾವ್ಯಾವ ತರಕಾರಿ ಬೆಲೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ ಅನ್ನೋದನ್ನ ನೋಡೋದಾದ್ರೆ
 
ತರಕಾರಿ ಬೆಲೆ ಎಷ್ಟಿತ್ತು? ಈಗ ಎಷ್ಟಾಗಿದೆ?
 
• ಕ್ಯಾರೆಟ್ 80- 160 ರೂ.‌
• ಬೀನ್ಸ್ 60- 120 ರೂ. 
• ಬಟಾಣಿ 160- 240 ರೂ.‌
• ಬೀಟ್ರೋಟ್ 60- 80 ರೂ. 
• ಮೂಲಂಗಿ 50- 80 ರೂ. 
• ಬದನೆಯಕಾಯಿ 60- 80 ರೂ. 
• ಕ್ಯಾಪ್ಸಿಕಮ್ 80- 100 ರೂ. 
• ನವಿಲು ಕೋಸು 60- 100 ರೂ. 
• ಹೀರೆಕಾಯಿ 60- 80 ರೂ. 
• ಪಡವಲಕಾಯಿ 50- 60 ರೂ. 
• ಟೋಮಾಟೋ 20 - 60 ರೂ.‌
• ಬೆಳ್ಳುಳ್ಳಿ 120- 140 ರೂ. 
• ಈರುಳ್ಳಿ 30- 40 ರೂ. 
• ಮೆಣಸಿನಕಾಯಿ 80- 100 ರೂ. 
• ಆಲೂಗಡ್ಡೆ 30- 40 ರೂ.
• ಕೊತ್ತಂಬರಿ ಸೊಪ್ಪು 60 ರೂ.
• ಪ್ರತಿ ಸೊಪ್ಪು ಒಂದು ಕಟ್ಟಿಗೆ 50 ರೂ. 
• ಒಂದು ನಿಂಬೆಹಣ್ಣುನ ಬೆಲೆ 10 ರೂ.
 
ಇನ್ನೂ ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಸಾಕಷ್ಟು ಅವಾಂತತ ಸೃಷ್ಟಿಯಾಗಿದೆ. ಮಳೆಯಿಂದ ಹಣ್ಣು ಮತ್ತು ತರಕಾರಿ, ಸೊಪ್ಪುಗಳು ಸಂಪೂರ್ಣ ನಾಶವಾಗ್ತಿವೆ. ಹೊಲ, ಗದ್ದೆಗಳಲ್ಲಿ ತರಕಾರಿಗಳು ಕೊಳೆತು ಹೋಗ್ತಿದ್ದು, ರೈತರು ಕಂಗಾಲಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ