ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳ ಎಂದರೆ ಬರಿ ಗುಂಡಿಗಳಿಂದ ಕುಡಿದ ರಸ್ತೆ ಗುಂಡಿಗಳೆಂದು ಭಾಸವಾಗುತ್ತದೆ. ಅದರಿಂದಾಗಿರುವ ಅನಾಹುತಗಳೆ ಸಾಕ್ಷಿ, ಆದರೆ ಇವುಗಳನ್ನು ತಪ್ಪಿಸಲ ಬಿಬಿಎಂಪಿ ಉತ್ತಮ ಉಪಾಯ ಮಾಡಿತ್ತು. ಆಧುನಿಕವಾಗಿ ಟೆಕ್ನಾಲಜಿ ಬಳಸಿ ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ ಕೂಡ ಮಾಡಿದೆ. ಆದ್ರೆ ಇದೀಗಾ ಈ ಕಾಮಗಾರಿ ಕಳಪೆ ಪಟ್ಟಿಗೆ ಸೇರಿದೆ.
ರಸ್ತೆ ಗುಂಡಿಗೆ ಮುಕ್ತಿಯಾಡುವ ಉದ್ದೇಶದಿಂದ ದೇಶದಲ್ಲೇ ಪ್ರಥಮ ಬಾರಿಗೆ ರ್ಯಾಪಿಡ್ ರಸ್ತೆ ಹಾಕಲಾಗಿತ್ತು. ಈ ರ್ಯಾಪಿಡ್ ರಸ್ತೆ ವರ್ಷಾನುಗಟ್ಟಲೆ ಬಾಳಿಕೆ ಬರುತ್ತೆ ಅಂತಿದ್ದ ಬಿಬಿಎಂಪಿ ಅಧಿಕಾರಿಗಳು ಇದೀಗಾ ಬೈಕ್ ಸವಾರರ ಶಾಪಕ್ಕೀಡಾಗಿದ್ದಾರೆ. ಯಾಕಂದ್ರೆ ಅದೇ ರ್ಯಾಪಿಡ್ ರೋಡ್ನಲ್ಲಿ ಇದೀಗಾ ಬಿರುಕು ಕಾಣಿಸಿಕೊಂಡಿದೆ. ಬಿಬಿಎಂಪಿಯ ಮತ್ತೊಂದು ಹೊಸ ಐಡಿಯಾ ಅಟ್ಟರ್ ಪ್ಲಾಪ್ ಆಗಿದೆ.
337.5 ಮೀಟರ್ ಉದ್ದದ ರಸ್ತೆಯನ್ನು ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಪೇವ್ಮೆಂಟ್ ತಂತ್ರಜ್ಞಾನದ ಮೂಲಕ ನಿರ್ಮಾಣ ಮಾಡಲಾಗಿತ್ತು. ದೇಶದಲ್ಲೇ ಪ್ರಪ್ರಥಮ ಎನ್ನಲಾದ ರ್ಯಾಪಿಡ್ ರಸ್ತೆಯನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಲೋಕಾರ್ಪಣೆ ಮಾಡಿ ಈ ರಸ್ತೆ ಯಶಸ್ವಿಯಾದರೆ ಇತರ ಹಲವು ಕಡೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದ್ರೇ ಇದೀಗಾ ಅದೇ ರಸ್ತೆಯಲ್ಲಿ ಬಿರುಕು ಮೂಡಿದೆ.ಘಟನೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ತುಷಾರ್ ಗಿರೀನಾಥ್ ಪ್ರತಿಕ್ರಿಯೆ ನೀಡಿದ್ದು ಇದು ಪ್ರಯೋಗತ್ಮಕ ರಸ್ತೆ ಆಗಿದೆ .ಯಾವ ಕಾರಣದಿಂದ ಆಗಿದೆ ಅಂತ IISC ಅವರು ತಮ್ಮ ರಿಪೋರ್ಟ್ ನಲ್ಲಿ ಹೇಳಲಿದ್ದಾರೆ. ಆ ರಿಪೋರ್ಟ್ ಇನ್ನು ನಮಗೆ ತಲುಪಿಲ್ಲ ,ತಲುಪಿದ ನಂತರ ಇನ್ನು ಮುಂದೆ ಏನು ಮಾಡಬೇಕು ಅಂತ ಯೋಚನೆ ಮಾಡ್ತೀವಿ .ಅಲ್ಲದೆ ಇದಕ್ಕೆ ಆಗುವ ಆರ್ಥಿಕ ಎಷ್ಟು ಆಗಲಿದೆ, ರಸ್ತೆ ಅಳತೆ ಎಷ್ಟಿರಬೇಕು ಅಂತ ವೈಜ್ಞಾನಿಕವಾಗಿ ಸಲಹೆ ಪಡೆದು ನಿರ್ಧಾರ ಮಾಡುತ್ತೇವೆ. ಅದನ್ನೆಲ್ಲ ತೆಗೆದುಕೊಂಡು ನಾವು ಮುಂದಕ್ಕೆ ಹೋಗ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಒಟ್ಟಾರೆ ಬಿಬಿಎಂಪಿ ಹೊಸ ಪ್ಪಯತ್ನ ಮಾಡ್ತಿದೆ, ಆದ್ರೆ ಅದು ಸಹ ಕಳಪೆ ಕಾಮಗಾರಿ ಲಿಸ್ಟ್ ಗೆ ಆಲ್ರೆಡಿ ಬಂದಿದೆ . ಇದನ್ನು ಕಂಡ ಜನರು ಮಾತ್ರ ಬೇಸತ್ತುಹೋಗಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಒಂದಲ್ಲ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.