ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಬಡವರಿಗೆ ನೀಡುತಿದ್ದ ಪಡಿತರ ಅಕ್ಕಿಯ ಪ್ರಮಾಣ ಇಳಿಕೆ
ಗುರುವಾರ, 5 ಜುಲೈ 2018 (12:59 IST)
ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡನೆ ಮಾಡಿದ್ದು, ಈ ಮೂಲಕಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿ ಬಡವರಿಗೆ ನೀಡುತಿದ್ದ ಪಡಿತರ ಅಕ್ಕಿಯ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ.
ಅಕ್ಕಿ 7 ಕೆಜಿಯಿಂದ 5 ಕೆಜಿಗೆ ಇಳಿಕೆ ಮಾಡಲಾಗಿದ್ದು, ರಿಯಾಯತಿ ದರದಲ್ಲಿ ಅರ್ಧ ಕೆಜಿ ತೊಗರಿ ಬೇಳೆ, ಬಿಪಿಎಲ್ ವರ್ಗಕ್ಕೆ 1 ಕೆಜಿ ಪಾಮ್ ಆಯಿಲ್ ಎಣ್ಣೆ, 1 ಕೆಜಿ ಆಯೋಡಿನ್ ಉಪ್ಪು, 1 ಕೆಜಿ ಸಕ್ಕರೆ ನೀಡುವುದರ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ