ಹಲಸೂರಿನ ಮೆಟ್ರೋ ಪಕ್ಕದಲ್ಲಿ ಇರುವ ರಸ್ತೆ ಅವ್ಯವಸ್ಥೆಯ ಆಗರ

ಭಾನುವಾರ, 12 ಸೆಪ್ಟಂಬರ್ 2021 (21:17 IST)
ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿರುವ ಹಲಸೂರು ಅತೀ ಹೆಚ್ಚು ಜನನಿಬಿಡ ಪ್ರದೇಶ. ಇಲ್ಲಿ ಪ್ರತಿನಿತ್ಯ ಸಾವಿರಾರು ಜನರು ಓಡಾಟ ನಡೆಸುತ್ತಾರೆ. ಆದ್ರೆ ಈ ರಸ್ತೆಯ ಅವ್ಯವಸ್ಥೆ  ನೋಡಿದ್ರೆ ನೀವು ಹೀಗೂ ಇರುತ್ತಾ ಬೆಂಗಳೂರು ಅನ್ನದೇ ಇರುವುದಿಲ್ಲ. ಇಲ್ಲಿರುವ ಸಮಸ್ಯೆ ಒಂದು ಎರಡಾ? ಸಮಸ್ಯೆಗಳ ಸರಮಾಲೆಯಲ್ಲಿ ನಿತ್ಯ ಜನರು ಜೀವನ ಸಾಗಿಸುತ್ತಿದ್ದಾರೆ. ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಆದ್ರೆ ಈ ರಸ್ತೆಯಲ್ಲಿ ಓಡಾಡುವ ಮುನ್ನ ಪ್ರಾಣವನ್ನ ಕೈಯಲ್ಲಿ ಹಿಡಿದುಕೊಂಡು ಜನರು ಓಡಾಡುತ್ತಾರೆ. ಯಾವಾಗ ಏನಾಗುತ್ತೋ ಎಂಬ ಆತಂಕದ ನಡುವೆಯೇ ಜನರು ಜೀವನ ಕೂಡ ಸಾಗಿಸುತ್ತಿದ್ದಾರೆ. ಇನ್ನೂ ಈ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಒಂದು ಕಡೆ ರಸ್ತೆ ಸರಿ ಇಲ್ಲ, ಮತ್ತೊಂದು ಕಡೆ ಬೀದಿ ಲೈಟ್ ಇಲ್ಲ, ಹೀಗೆ ಈ ಏರಿಯಾ ಪೂರ್ತಿ ಸಮಸ್ಯೆನೇ. ಈ ರಸ್ತೆಯಲ್ಲಿ ಆಂಬ್ಯಲೇನ್ಸ್ ಬರುವುದಕ್ಕೆ ಆಗಲ್ಲ, ಆಟೋದವರು ಕೂಡ ಈ ರಸ್ತೆಗೆ ಬರುವುದಕ್ಕೆ ಹಿಂದೆ- ಮುಂದೆ ನೋಡುತ್ತಾರೆ. ಆಷ್ಟರ ಮಟ್ಟಿಗೆ ಆಧ್ವಾನದ ಸ್ಥಿತಿಯಲ್ಲಿ ರಸ್ತೆ ಇದೆ.
 
ಒಂದೂವರೆ ವರ್ಷವಾಗಿದೆ ಆದ್ರು ಕೂಡ ರಸ್ತೆಯ ಕಾಮಗಾರಿ ಮಾತ್ರ ಆಗಿಲ್ಲ. ರಸ್ತೆ ಕಾಮಗಾರಿಗಾಗಿ ಸರ್ಕಾರದಿಂದ  ಇದೂವರೆಗೂ 2 ಕೋಟಿ ಹಣ ಬಿಡುಗಡೆಯಾಗಿದೆ. ಶಾಸಕ ಹ್ಯಾರಿಸ್ ಕ್ಷೇತ್ರದ ರಸ್ತೆಯ ಸ್ಥಿತಿಯೇ ಆಧ್ವಾನ. ಜನರು ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಕಂಪ್ಲೇಟ್ ಮಾಡಿದ್ರು ಇದೂವರೆಗೂ ಯಾವುದೇ ಪ್ರಯೋಜನವಾಗ್ತಿಲ್ವಾಂತೆ. ಈ ಒಂದು ರಸ್ತೆಯಲ್ಲಿ ಆಗಾಗ ಅಪಘಾತ ಸಂಭವಿಸುತ್ತಿರುತ್ತದೆ. ಕೇವಲ ಒಂದುವಾರದ ಕೆಳಗೆ ಆಟೋ ಮಗುಚಿಬಿದ್ದು ಆಟೋದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಇನ್ನೂ ರಸ್ತೆಯಲ್ಲಿ  ಪ್ರತಿನಿತ್ಯ ಜನರು ಓಡಾಡಲಾಗದಂತಹ ಪರಿಸ್ಥಿತಿ ಇದ್ದು, ರೊಚ್ಚಿಗೆದ್ದ  ಜನರು ರಸ್ತೆಯಲ್ಲಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ನಿಂದಿಸುತ್ತಿದ್ರು, ಅಷ್ಟೇ ಅಲ್ಲ  ಜನಪ್ರತಿನಿಧಿಗಳ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತಪಡಿಸಿದ್ರು.ಇನ್ನೂ  ರಸ್ತೆ ಸರಿಪಡಿಸಿಲ್ಲ ಅಂದ್ರೆ ಸುಮ್ಮನೆ ಇರಲ್ಲ , ನಮ್ಮ ಗೊಳು ಕೇಳುವವರಿಲ್ಲ, ಈ ರಸ್ತೆ ಅವ್ಯವಸ್ಥೆಯಿಂದ ಕೂಡಿರುವುದು ಯಾರಿಗೂ ಕಾಣೀಲ್ವಾ? ರಸ್ತೆಯನ್ನ ಸರಿಪಡಿಸದೇ ಏನು ಮಾಡ್ತಿದೀರಾ ?  ಎಂದು ಅಧಿಕಾರಿಗಳಿಗೆ ಜನರು  ತರಾಟೆಗೆ ತಗೊಂಡರು. ಇನ್ನೂ  ಮುಂದಿನ ದಿನಗಳಲ್ಲಿ ಅಧಿಕಾರಿಗಳು ಏನು ಮಾಡ್ತಾರೋ?  ಕೂಡಲ್ಲೇ ಜನಪ್ರತಿನಿಧಿಗಳು ಎಚ್ಚೇತ್ತಕೊಂಡು ಸಮಸ್ಯೆ ಬಗೆಹಾರಿಸಿದ್ರೆ ಬಚಾವ್ , ಇಲ್ಲಾಂದ್ರೆ ಜನಪ್ರತಿನಿಧಿಗಳು ಜನರ ಬಾಯಿಗೆ ತುತ್ತಾಗಬೇಕಾಗುತ್ತೆ , ಆಮೇಲೆ ಪರಿಸ್ಥಿತಿ ಎಲ್ಲಿ ಹೋಗಿ ಮುಟ್ಟುತ್ತೋ? ಎಂಬುದನ್ನ ಕಾದು ನೋಡಬೇಕಾಗುತ್ತೆ.
road

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ