ಆಕ್ರಮವಾಗಿ ಸಿಲಿಂಡರ್ ಮಾರಾಟ ಮಾಡುವ ದಲ್ಲಾಳಿಗಳ ಹಾವಳಿ

ಭಾನುವಾರ, 30 ಏಪ್ರಿಲ್ 2023 (17:30 IST)
ನೆಲಂಮಗಲದ  ಸುಭಾಷ್ ನಗರದ ನಿವಾಸಿಗಳು  ಆಕ್ರಮ ಸಿಲಿಂಡರ್ ಮಾರಾಟ ಮಾಡುವ ದಲ್ಲಾಳಿಗಳಿಂದ ಆತಂಕಕ್ಕೆ ಹೀಡಾಗಿದ್ದಾರೆ. ಬ್ಲಾಕ್ ನಲ್ಲಿ ಸಿಲಿಂಡರ್ ಮಾರಾಟ ಮಾಡುವ ದಲ್ಲಾಳಿಗಳಿಂದ ಅಕ್ಕಪಕ್ಕದ ಜನರಿಗೆ ಸಮಸ್ಯೆಯಾಗ್ತಿದೆ.ನಿತ್ಯ  ಕಡಿಮೆ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಾ ದಲ್ಲಾಳಿಗಳು ದಂಧೆ ಎಸೆಗುತ್ತಿದ್ದಾರೆ.ದಲ್ಲಾಳಿಗಳ ಉಪಟಳಕ್ಕೆ ಸ್ಥಳೀಯ ನಿವಾಸಿಗಳು  ನಲುಗಿ ಹೋಗಿದ್ದಾರೆ.
 
ಇನ್ನು ಯಾವಾಗ ಸಿಲಿಂಡರ್ ಸ್ಫೋಟವಾಗುತ್ತೋ ಅಂತಾ ಜನರು ಆತಂಕಕ್ಕೆ ಒಳಗಾಗಿದ್ದಾರೆ.ಎಷ್ಟೋ ಬಾರಿ ಸಿಲಿಂಡರ್ ಇಲ್ಲಿ ಡಂಪ್ ಮಾಡದಂತೆ ಸ್ಥಳೀಯ ನಿವಾಸಿಗಳು  ಮನವಿ ಮಾಡಿಕೊಂಡಿದಾರೆ .ಆದ್ರು ಇಲ್ಲಿ ಸಿಲಿಂಡರ್ ಡಂಪ್ ಮಾಡ್ತಾ ಜನರಿಗೆ ಇನ್ನಷ್ಟು ಕಿರಿಕಿರಿ ಉಂಟುಮಾಡ್ತಿದ್ದಾರೆ.ಅಷ್ಟೇ ಅಲ್ಲ ದಲ್ಲಾಳಿಗಳು ಪೊಲೀಸರಿಗೆ ಹಣಕೊಟ್ಟು ಬಾಯಿಮುಚ್ಚಿಸುತ್ತಾರೆ.ಇವರ ಉಪಟಳಕ್ಕೆ ಕೊನೆಯೇ ಇಲ್ಲದಂತಾಗಿದೆ.ಅಕ್ಕಪಕ್ಕದಲ್ಲಿ ಮನೆಗಳು, ದೇವಸ್ಥಾನ ಇದ್ದು ಜನರಿಗೆ ಇನ್ನಿಲ್ಲದ ಫಜೀತಿ ಶುರುವಾಗಿದೆ.
 
ಮನೆಯ ಗೌಡನ್ ನಲ್ಲಿ ನಿತ್ಯ ನೂರಾರು ಸಿಲಿಂಡರ್  ದಲ್ಲಾಳಿಗಳು ಡಂಪ್ ಮಾಡಿಟ್ಟಿದ್ದಾರೆ.ನೆಲಮಂಗಲ ಸುಭಾಷ್ ನಗರದ 6 ನೇ ಕ್ರಾಸ್ ನಲ್ಲಿ ಈ ಘಟನೆ ನಿತ್ಯ ನಡೆಯುತ್ತೆ.ಇನ್ನು ಈ ದಲ್ಲಾಳಿಗಳ ಹಾವಳಿಯಿಂದ ಜನರಂತೂ ರೋಸಿಹೋಗಿದ್ದಾರೆ.ದಲ್ಲಾಳಿಗಳು ವಿರುದ್ಧ ಜನರು ವ್ಯಾಪಕ ಅಸಾಮಾಧಾನ ಹೊರಹಾಕ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ