ರಾಜಧಾನಿಯಲ್ಲಿ ಪುಡಿ ರೌಡಿಗಳ ಹಾವಳಿ

ಮಂಗಳವಾರ, 3 ಅಕ್ಟೋಬರ್ 2023 (14:03 IST)
ರಾತ್ರಿ ವೇಳೆ ನಡು ರಸ್ತೆಯಲ್ಲಿ  ಗಾಂಜಾ ಸೇವನೆ, ಮದ್ಯಸೇವನೆ‌ ಮಾಡ್ತಾರೆ ಅಂತ ಸಾರ್ವಜನಿಕರು ಆರೋಪ ಮಾಡ್ತಿದ್ದಾರೆ.ರೌಡಿಗಳನ್ನ ಕಂಟ್ರೋಲ್ ಮಾಡುವಲ್ಲಿ  ಪೊಲೀಸ್ ಇಲಾಖೆ ವಿಫಲವಾಗಿದೆ.ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಇವರಿಂದ ಟಾರ್ಚರ್ ಆಗ್ತಿದೆ.ಈ ರೌಡಿಗಳ ಪುಂಡಾಟದಿಂದ ಎರಡು ವಾಹನಗಳಿಗೆ ಡ್ಯಾಮೇಜ್ ಆಗಿದೆ.ಇನ್ನೂ ನಗರದ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗರಾಜಪುರಂ ಸಾಯಿತ್ ಪಾಳ್ಯದಲ್ಲಿ ಅಟ್ಟಹಾಸ ಮೆರೆದಿದ್ದಾರೆ.ಇವರ ಹೆಡೆಮುರಿ ಕಟ್ಟುವಂತೆ ಪೊಲೀಸರಿಗೆ ಸಾರ್ವಜನಿಕರು ಮನವಿ  ಮಾಡಿದ್ದಾರೆ.ಇನ್ನಾದ್ರೂ ಎಚ್ಚೆತ್ತುಕೊಂಡು ಇದಕ್ಕೆ ಬಾಣಸವಾಡಿ ಪೊಲೀಸರು ಕಡಿವಾಣ ಹಾಕ್ತಾರಾ? ಎಂದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ