ತಾಯಿಯ ಮೇಲೆ ಆ ಕೆಲಸ ಮಾಡಿಲ್ಲ ಎಂದ ಮಗ: ಬಿಡುಗಡೆಗೊಳಿಸಿದ ಕೋರ್ಟ್

ಭಾನುವಾರ, 25 ಆಗಸ್ಟ್ 2019 (17:12 IST)

ಹೆತ್ತ ತಾಯಿಯ ಮೇಲೆ ಅತ್ಯಾಚಾರ ಮಾಡಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ನ್ಯಾಯಾಲಯ ಬಿಡುಗಡೆಗೊಳಿಸಿದೆ.

ಮದ್ಯ ವ್ಯಸನಿಯಾಗಿದ್ದ ಆರೋಪಿಯು ತನ್ನ ತಾಯಿ ಹತ್ತಿರ ಕುಡಿಯೋಕೆ ಅಂತ ಹಣ ಕೇಳಿದ್ದಾನೆ. ಆದರೆ ತಾಯಿ ಹಣ ಕೊಡದ ಕಾರಣ ಆಕೆಯ ಮೇಲೆ ಹಲ್ಲೆ ನಡೆಸಿದ್ದನು. ಅಷ್ಟೇ ಅಲ್ಲ ಅನುಚಿತವಾಗಿ ವರ್ತಿಸಿದ್ದನು ಅಂತ ತಾಯಿಯೇ ಮಗನ ವಿರುದ್ಧ ಅತ್ಯಾಚಾರ ಕೇಸ್ ದಾಖಲು ಮಾಡಿದ್ದಳು.

ಆದರೆ ಸಾಕ್ಷಿ ಆಧಾರ ಇಲ್ಲದ ಕಾರಣ ಹಾಗೂ ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಅತ್ಯಾಚಾರ ಆಗಿಲ್ಲ ಅಂತ ರಿಪೋರ್ಟ್ ಬಂದಿರೋ ಕಾರಣದಿಂದ ಮುಂಬೈ ಕೋರ್ಟ್ ಆರೋಪಿಯನ್ನು ನಿರಪರಾಧಿ ಎಂದು ತೀರ್ಮಾನಿಸಿ ಬಿಡುಗಡೆಗೊಳಿಸಿದೆ.

2018ರ ಜನೇವರಿ 1 ರಂದು ಈ ಘಟನೆ ನಡೆದಿತ್ತು. ಆದರೆ ಹಲ್ಲೆ ಮಾಡಿದ್ದಾಗಿ ಒಪ್ಪಿಕೊಂಡಿರೋ ಆರೋಪಿ ಆ ಕುರಿತು ಕ್ಷಮೆ ಕೇಳಿದ್ದನು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ