ರಾಜ್ಯ ಕಾಂಗ್ರೆಸ್‌ ಕಮಿಷನ್'ನಿಂದ , ಕಮಿಷನ್'ಗಾಗಿ, ಕಮಿಷನ್‌ಗಾಗಿರುವ ಸರ್ಕಾರ

Sampriya

ಸೋಮವಾರ, 6 ಜನವರಿ 2025 (19:58 IST)
ಬೆಂಗಳೂರು: ಜನಪರ ಕಾಳಜಿ, ಜನಹಿತ ಕಾಪಾಡುವ ಉದ್ದೇಶ ಯಾವುದೇ ಸರ್ಕಾರಕ್ಕೆ ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜ್ವಲಂತ ಉದಾಹರಣೆಯಾಗುತ್ತಿರುವುದು ನಮ್ಮ ರಾಜ್ಯದ ಜನರ ದುರಂತ ಎಂದು ಎಂಎಲ್‌ಸಿ ಸಿಟಿ ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಭಕ್ತರಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಚುಚ್ಚುಮದ್ದು ಪಡೆದ ಬಳಿಕ ಎರಡೂವರೆ ತಿಂಗಳ ಮಗು ಸಾವನ್ನಪ್ಪಿತ್ತು. ಮಗು ಸಾವಿಗೆ ಚುಚ್ಚುಮದ್ದು ನೀಡಿದ್ದೇ ಕಾರಣ ಎಂದು ಪೊಷಕರು ಗಂಭೀರ ಆರೋಪ ಮಾಡಿದ್ದಾರೆ.

ಇ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿಟಿ ರವಿ ಪೋಸ್ಟ್ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಪೋಸ್ಟ್‌ನಲ್ಲಿ ಹೀಗಿದೆ: ಜನಪರ ಕಾಳಜಿ, ಜನಹಿತ ಕಾಪಾಡುವ ಉದ್ದೇಶ ಯಾವುದೇ ಸರ್ಕಾರಕ್ಕೆ ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜ್ವಲಂತ ಉದಾಹರಣೆಯಾಗುತ್ತಿರುವುದು ನಮ್ಮ ರಾಜ್ಯದ ಜನರ ದುರಂತ.

ಕೇವಲ ಕಮಿಷನ್ ದುಡ್ಡಿನ ಆಸೆಗೆ, ಕಳಪೆ ಮಟ್ಟದ ಔಷಧಿಗಳನ್ನು ಪೂರೈಕೆ ಮಾಡಿ, ಪೂರೈಕೆಯಾದ ಔಷಧಿಗಳನ್ನು ಸರಿಯಾಗಿ ಪರೀಕ್ಷೆ ಮಾಡದೆ ಮಕ್ಕಳ ಹಾಗು ಬಾಣಂತಿಯರ ಸರಣಿ ಸಾವುಗಳನ್ನು ನೋಡುವುದು ಕಾಂಗ್ರೆಸ್ ಸರ್ಕಾರಕ್ಕೆ ಒಂದು ರೀತಿಯ ಪೈಶಾಚಿಕ ಸಂತೋಷದಂತೆ ಕಾಣುತ್ತದೆ...

ರಾಜ್ಯ ಕಾಂಗ್ರೇಸ್ ಸರ್ಕಾರ ಅದು , ಕಮಿಷನ್'ನಿಂದ , ಕಮಿಷನ್'ಗಾಗಿ, ಕಮಿಷನ್'ಗೋಸ್ಕರ ಇರುವ ಸರ್ಕಾರ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ