ಕೊರೊನಾದಿಂದ ರಾಜ್ಯ ಸರ್ಕಾರ ಕಿಂಚಿತ್ತೂ ಪಾಠ ಕಲಿತಿಲ್ಲ- ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಕಿಡಿ

ಬುಧವಾರ, 21 ಏಪ್ರಿಲ್ 2021 (11:59 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಬ್ಬರ ಹೆಚ್ಚಾಗುತ್ತಿದೆ. ಈ ನಡುವೆ ಕೊರೊನಾದಿಂದ ರಾಜ್ಯ ಸರ್ಕಾರ ಕಿಂಚಿತ್ತೂ ಪಾಠ ಕಲಿತಿಲ್ಲ ಎಂದು ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ , ಸರ್ಕಾರಕ್ಕೆ ತಜ್ಞರ ಸಲಹೆ ಕಲ್ಲಿನ ಮೇಲೆ ಮಳೆ ಸುರಿದಂತೆ. ರಾಜ್ಯ ಸರ್ಕಾರ ಕೊರೊನಾ ಟೆಸ್ಟಿಂಗ್ ನಲ್ಲೂ ಫೇಲ್. ಟ್ರ್ಯಾಕಿಂಗ್ ನಲ್ಲೂ ಫೇಲ್, ಟ್ರೀಟ್ಮೆಂಟ್ ನಲ್ಲೂ ಫೇಲ್ ಎಂದು ವ್ಯಂಗ್ಯ ಮಾಡಿದೆ.

ರಾಜ್ಯ ಬಿಜೆಪಿ ಸರ್ಕಾರ  ಬೌದ್ಧಿಕವಾಗಿ ದಿವಾಳಿಯಾಗಿದೆ. ಈ ಸರ್ಕಾರಕ್ಕೆ ಕೊರೊನಾ ನಿರ್ವಹಣೆ ಇಚ್ಛಾಶಕ್ತಿ ಇಲ್ಲ. ಸರ್ಕಾರಕ್ಕೆ ಕಾರ್ಯ ಸೂಚಿಯೂ ಇಲ್ಲವೆಂದು ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ