ರಾಹುಲ್ ಗಾಂಧಿ ಚೇತರಿಕೆಗೆ ಹಾರೈಸಿದ ಪ್ರಧಾನಿ ಮೋದಿ

ಬುಧವಾರ, 21 ಏಪ್ರಿಲ್ 2021 (09:42 IST)
ನವದೆಹಲಿ: ಕೊರೋನಾ ಸೋಂಕಿತರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೀಘ‍್ರ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.


ರಾಹುಲ್ ಗೆ ಸಣ್ಣ ಪ್ರಮಾಣದ ಲಕ್ಷಣಗಳೊಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಅವರು ಸ್ವತಃ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಹೀಗಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ‘ಸಂಸದ ರಾಹುಲ್ ಗಾಂಧಿ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ’ ಎಂದು ಬರೆದುಕೊಂಡಿದ್ದಾರೆ. ಮೊನ್ನೆಯಷ್ಟೇ ಕೊರೋನಾ ಭೀತಿಯಿಂದಾಗಿ ರಾಹುಲ್ ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಕಾಂಪೈನ್ ರದ್ದುಗೊಳಿಸಿದ್ದರು. ಇದೀಗ ಅವರೂ ಸೋಂಕಿತರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ