ತೃತೀಯ ಲಿಂಗಿಗೆ ರಾಜ್ಯದ ಮೊದಲ ಸರಕಾರಿ ನೌಕರಿ

ಬುಧವಾರ, 5 ಡಿಸೆಂಬರ್ 2018 (19:12 IST)
ವಿಧಾನ ಪರಿಷತ್ ಸಚಿವಾಲಯದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಸರಕಾರಿ ಹುದ್ದೆ ತೃತೀಯ ಲಿಂಗಿಗೆ ಲಭಿಸಿದೆ.

ಡಿ ಗ್ರೂಪ್ ಖಾಯಂ ನೌಕರರಾಗಿ ತೃತೀಯ ಲಿಂಗದ ಮೋನಿಷಾ ಎಂಬುವರಿಗೆ ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕ ಮಾಡಲಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಯಂ ಸರಕಾರಿ ಹುದ್ದೆ ಪಡೆದ ತೃತಿಯ ಲಿಂಗಿ ಮೋನಿಷಾ ಆಗಿದ್ದಾರೆ.

ಸುವರ್ಣ ವಿಧಾನಸೌಧದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ‌ ಹೇಳಿಕೆ ನೀಡಿದ್ದು, 2016 ವಿಧಾನ ಸೌಧದಲ್ಲಿ ಖಾಲಿ ಇದ್ದ ಗ್ರೂಪ್ 'ಡಿ' ಹುದ್ಗೆಗೆ ಅರ್ಜಿ ಹಾಕಿದ್ದ ತೃತೀಯ ಲಿಂಗದ ಮೋನಿಷಾ ನೇಮಕಗೊಂಡಿದ್ದಾರೆ.


ಸರಕಾರದಿಂದ ತೃತೀಯ ಲಿಂಗದವರಿಗೆ ಯಾವುದೇ ಹುದ್ದೆಯಿಲ್ಲದ ಕಾರಣ ನಾವು, ಲಿಂಗತ್ವದ ಹೊಂದಾಣಿಕೆ ಆಗದ ಕಾರಣ ಅವರಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದೇವು. ಮೋನಿಷಾ ನ್ಯಾಯಾಲಯಕ್ಕೆ ಹೋಗಿದ್ದರಿಂದ, ನ್ಯಾಯಾಲಯದ ಸೂಚನೆ ಮೇರೆಗೆ ಸಭಾಪತಿ, ಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿ ಖಾಯಂ ನೇಮಕ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ