ಕೇರಳದ ಸಂಕಷ್ಟಕ್ಕೆ ಮಿಡಿದ ರಾಜ್ಯ ಸರ್ಕಾರಕ್ಕೆ ನಾಡಿನ ಸಂಕಷ್ಟ ಕಾಣ್ತಿಲ್ವಾ: ಬಿಜೆಪಿ ಗರಂ

Sampriya

ಮಂಗಳವಾರ, 20 ಆಗಸ್ಟ್ 2024 (17:12 IST)
Photo Courtesy X
ಬೆಂಗಳೂರು: ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡು, ಭಂಡತನದಿಂದ ಖುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್  ಸರ್ಕಾರ, ನೆರೆ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡದೆ, ಸಂಕಷ್ಟಕ್ಕೆ ತಳ್ಳಿಬಿಟ್ಟಿದೆ ಎಂದು ಬಿಜೆಪಿ ಹೇಳಿದೆ.

ಶಿರೂರು ಗುಡ್ಡಕುಸಿತ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಭವಾಗುತ್ತಿರುವ ಬಗ್ಗೆ ಬಿಜೆಪಿ ಪ್ರಶ್ನೆ ಮಾಡಿದೆ.

ಕೇರಳದ ವಯನಾಡಿನಲ್ಲಿ ಸಂಭವಿಸಿದ ಸಂಕಷ್ಟಕ್ಕೆ ಮಿಡಿದ ರಾಜ್ಯಸರ್ಕಾರಕ್ಕೆ ತನ್ನವರ ನೋವು ಅರ್ಥವಾಗುತ್ತಿಲ್ವ. ಬೇರೆ ರಾಜ್ಯಕ್ಕೆ ಮನೆ ನಿರ್ಮಾಣದ ಆಶ್ವಾಸನೆ ಕೊಟ್ಟ ಸರ್ಕಾರ ತನ್ನ ರಾಜ್ಯದ ಸಂತ್ರಸ್ತರ ಬಗ್ಗೆ ಯಾಕೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡು, ಭಂಡತನದಿಂದ ಖುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ, ನೆರೆ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡದೆ, ಸಂಕಷ್ಟಕ್ಕೆ ತಳ್ಳಿಬಿಟ್ಟಿದೆ.

ಕೇರಳ ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡಲು ಮುಂದಾಗಿರುವ ಕಾಂಗ್ರೆಸ್   ಸರ್ಕಾರವೀಗ, ರಾಜ್ಯದ ಶಿರೂರು ನೆರೆ ಸಂತ್ರಸ್ತ ಕುಟುಂಬದ ನೋವಿಗೆ ಸ್ಪಂದಿಸದೆ ಅಮಾನವೀಯವಾಗಿ ನಡೆದುಕೊಂಡಿದೆ. ನೆರೆ ಸಂತ್ರಸ್ತರಿಗೆ ನಿಗದಿಯಾಗಿದ್ದ 5 ಲಕ್ಷ ರೂಗಳ ಪರಿಹಾರ ಮೊತ್ತವನ್ನು 2.4 ಲಕ್ಷಕ್ಕೆ ಕಡಿತಗೊಳಿಸುವ ಮೂಲಕ ಸಂಕಷ್ಟದಲ್ಲಿದ್ದವರಿಗೆ ದ್ರೋಹ ಬಗೆದಿದೆ.

ಭ್ರಷ್ಟಾಚಾರದ ಪಾಪದ ಕೂಪದಲ್ಲಿ ಬಿದ್ದು ಪರಿತಪಿಸುತ್ತಿರುವ ಸಿದ್ದರಾಮಯ್ಯನವರೇ, ನಿಮಗೆ ಸಂತ್ರಸ್ತ ಕುಟುಂಬದವರ ಶಾಪ ತಟ್ಟದೆ ಇರುವುದೇ.?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ