ಟಿಪ್ಪು ಪ್ರತಿಮೆ ದೆಹಲಿಯ ಸಂಸತ್ ಭವನದ ಮುಂದೆ ಸ್ಥಾಪಿಸಬೇಕು-ವಾಟಾಳ್ ನಾಗರಾಜ್ ಆಗ್ರಹ

ಗುರುವಾರ, 11 ನವೆಂಬರ್ 2021 (20:49 IST)
ಬೆಂಗಳೂರು: ದೇಶಕ್ಕಾಗಿ ತನ್ನ ಮಕ್ಕಳನ್ನು ಒತ್ತೆ ಇಟ್ಟ ಟಿಪ್ಪು ಸುಲ್ತಾನ್ ಪ್ರತಿಮೆ ದೆಹಲಿಯ ಸಂಸತ್ ಭವನದ ಮುಂದೆ ಸ್ಥಾಪಿಸಬೇಕು, ಹಾಗಾದರೆ ದೇಶಕ್ಕೆ ಗೌರವ ಮತ್ತು ಶಕ್ತಿ ಎಂದು ಕನ್ನಡ ಚಳುವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಶ್ಲಾಘಿಸಿದರು.
 
ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್  ಬುಧವಾರ  ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಮುಂಭಾಗ ಪುಷ್ಪಾರ್ಚನೆ ಮಾಡುವ ಮೂಲಕ ಮಸರು ಹುಲಿಗೆ ಗೌರವ ಸೂಚಿಸಿದರು. 
 
ಈ ಸಂದಭದಲ್ಲಿ ಟಿಪ್ಪು ಸುಲ್ತಾನ್ ಭಾವ ಚಿತ್ರವನ್ನು ಇಟ್ಟು ಬೆಳ್ಳಿ ರಥದಲ್ಲಿ ಅರಮನೆಯಿಂದ ಕೋಟೆಯವರೆಗೆ ಮೆರವಣಿಗೆ ಮಾಡಲಾಯಿತು. 
 
ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ  ಮಾತನಾಡಿದ ವಾಟಾಳ ನಾಗರಾಜ್ ಟಿಪ್ಪು ಸುಲ್ತಾನ್ ವಿಶ್ವ ಕಂಡಂತಹ ಮಹಾನ್ ಹೋರಾಟಗಾರರು. ಗೌರವವನ್ನು ಸೂಚಿಸುವುದು ದೇಶಕ್ಕೆ ಗೌರವ ಕೊಟ್ಟಂತೆ. ಅದರಲ್ಲೂ ಟಿಪ್ಪು ಸುಲ್ತಾನ್ ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿ ಬಂದವರು ಎಂದು ನೆನೆದರು
 
ಟಿಪ್ಪು ಸುಲ್ತಾನ್ ಹುಟ್ಟಿದ ಸ್ಥಳ ದೇವನಹಳ್ಳಿಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಸರ್ಕಾರವನ್ನು ವರ್ಷದಿಂದ ಒತ್ತಾಯ ಮಾಡುತ್ತಿದ್ದೇನೆ. ಸರ್ಕಾರ ಇನ್ನೂ ಯಾವುದೇ ಗಮನವನ್ನು ನೀಡಿಲ್ಲ. ಸುಮಾರು 1000 ಕೋಟಿ ರೂ ಖರ್ಚು ಮಾಡಿ ಟಿಪ್ಪು ಸುಲ್ತಾನ್ ಸ್ಮಾರಕವನ್ನು ಅದ್ಭುತವಾಗಿ ಮಾಡಬೇಕು ಎಂದು ಮನವಿ ಮಾಡಿದರು.
 
 ಟಿಪ್ಪು ಜನ್ಮ ದಿನಾಚರಣೆಯನ್ನು ಸುಮಾರು 20 ವರ್ಷದಿಂದ ಕನ್ನಡ ಚಳುವಳಿ ಪಕ್ಷದಿಂದ ಮಾಡುತ್ತಾ ಬರುತ್ತಿದ್ದೇವೆ. ಒತ್ತಾಯ ಮಾಡಿದ ಮೇಲೆ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಮಾಡಿದರು. ನಂತರ ಬಂತಂಹ ಸರ್ಕಾರಗಳು ಟಿಪ್ಪು ಸುಲ್ತಾನ್ ಜಯಂತಿಯನ್ನು ಕೈ ಬಿಟ್ಟಿದ್ದಾರೆ ಎಂದು ದೂರಿದರು.
 
ಟಿಪ್ಪು ಜಯಂತಿ ಜೆ.ಡಿ.ಎಸ್, ಕಾಂಗ್ರೆಸ್ ಸೇರಿದಂತೆ ಯಾರಿಗೂ ಬೇಕಿಲ್ಲ. ಬಿ.ಜೆ.ಪಿ ಯಂತೂ ಜಯಂತಿ ಆಚರಣೆ ವಿರೋಧಿಸುತ್ತಾರೆ ಎಂದು ಕಿಡಿಕಾರಿದರು. 
 
ಸುಮಾರು 6 ದಶಕಗಳ ಕಾಲ ನಾನು ಹೋರಾಟ ನೆಡೆಸಿದ್ದೇನೆ. ನನಿಗೆ ಅಧಿಕಾರ ಸಿಕ್ಕಿದ್ದೇ ಅದಲ್ಲಿ ಅದರಲ್ಲೂ ಮುಖ್ಯಮಂತ್ರಿಯಾದರೆ ಜಗತ್ತೇ ಕಂಡಿರದಂತಹ ಅದ್ಬುತ ಸ್ಮಾರಕವನ್ನು ನಿರ್ಮಿಸಲು ತೀರ್ಮಾನಿಸಿದ್ದೇನೆ. ಈ ಕುರಿತು ಜನರು ತೀರ್ಮಾನಿಸಬೇಕು ಎಂದು ಹೇಳಿದರು.
 
ಟಿಪ್ಪು ಸುಲ್ತಾನ್ ದೇಶ ಕಂಡಂತಹ ಅಪ್ರತಿಮ ವೀರ ಹೀಗಾಗಿ ಸರ್ಕಾರ ಪುನರ್ ಪರಿಶೀಲನೆ ಮಾಡಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.
 
ಮಾಧ್ಯಮಗಳ ಜೊತೆ ಮಾತನಾಡಿದಅಖಿಲ ಕರ್ನಾಟಕ ಸೂಫಿ ಸಂತರ ರಾಜ್ಯಾಧ್ಯಕ್ಷ ವಲಿಭಾಗ್ ಖಾದ್ರಿ ಟಿಪ್ಪು ಸುಲ್ತಾನ್ ಅಭಿಮಾನದ ಸಂಕೇತ, ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಇಡೀ ವಿಶ್ವದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದಂತಹ ಕರ್ನಾಟಕದ ಗಂಡು ಗಲಿ ದಿ ಟಿಪ್ಪು ಸುಲ್ತಾನ್ 271 ನೆಯ ಜನ್ಮದಿನವಾಗಿದೆ ಎಂದು ನೆನೆದರು.
 
ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತು ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ಟಿಪ್ಪು ಸುಲ್ತಾನ್ ಅರಮನೆಯ ಬಳಿ ಜನ್ಮೋತ್ಸವಾದ ಅದ್ದೂರಿ ಆಚರಣೆ ನೆಡೆದಿದೆ ಎಂದು ಮಾಹಿತಿ ನೀಡಿದರು.
 
ಹಿಂದೂ ಮುಸಲ್ಮಾನರು ಸೇರಿದಂತೆ ಟಿಪ್ಪು ಸುಲ್ತಾನ್ ಅಭಿಮಾನಿಗಳು, ಕನ್ನಡ ಸಂಘಟನೆಗಳು, ಸೂಫಿ ಸಂಘಟನೆ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಎಲ್ಲಾ ಸದಸ್ಯರು ವಿಜೃಂಭಣೆಯಿಂದ ಆಚರಿಸಿದ್ದೇವೆ ಎಂದು ಹೇಳಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ