ದೀಪಾವಳಿ ಎಫೆಕ್ಟ್! ದೆಹಲಿಯ ವಾತಾವರಣ ಹದಗೆಟ್ಟಿದೆ

ಶುಕ್ರವಾರ, 5 ನವೆಂಬರ್ 2021 (15:08 IST)
ದೀಪಾವಳಿಯ ಹಬ್ಬದ ದಿನವಾದ ನಿನ್ನೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯುವಿನ ಗುಣಮಟ್ಟ ಅತ್ಯಂತ ಕಳಪೆಯಾಗಿದೆ ಹೀಗಂತ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶದಲ್ಲಿ ಮಾಹಿತಿ ಲಭ್ಯವಾಗಿದೆ.
ಏಜೆನ್ಸಿಯ ವಾಯು ಗುಣಮಟ್ಯ ಸೂಚ್ಯಂಕ ಮಾಪಕದಲ್ಲಿ ರೀಡಿಂಗ್ 100ಕ್ಕಿಂತ ಹೆಚ್ಚಿದ್ದಲ್ಲಿ, ವಾಯುಮಾಲಿನ್ಯವು ಆರೋಗ್ಯಕ್ಕೆ ಅಸುರಕ್ಷಿತವಾಗಿದೆ ಎಂದು ಪರಿಗಣಿಸಲಾಗುತ್ತದೆ. ರಾಜಧಾನಿಯಲ್ಲಿ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 314ರ ರೀಡಿಂಗ್ ದಾಖಲಿಸಿದ್ದು, ಅತ್ಯಂತ ಕಳಪೆಯಾಗಿರುವುದನ್ನು ತೋರಿಸುತ್ತದೆ. ಈ ಪ್ರಮಾಣದ ವಾಯುಮಾಲಿನ್ಯಕ್ಕೆ ನಗರದ ಜನತೆ ದೀರ್ಘಸಮಯದವರೆಗೆ ಉಸಿರಾಟದ ಸಮಸ್ಯೆಗಳಿಗೆ ತುತ್ತಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ