ತುಮಕೂರು : ಹೂವಿನಲ್ಲಿ ಕಲ್ಲು ಬಂದಿಲ್ಲ. ಯಾರೋ ದುಷ್ಕರ್ಮಿಗಳು ಎಸೆದಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಂಜೆ ಭೈರೆನಹಳ್ಳಿ ಬಳಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೆ. ಈ ವೇಳೆ ಸಾವಿರಾರು ಜನ ಕಾರ್ಯಕರ್ತರು ಇದ್ದರು. ನನ್ನನ್ನ ಮೇಲಿತ್ತಿಕೊಂಡರು. ಜೆಸಿಬಿಯಿಂದ ಮೇಲೆಯಿಂದ ಹೂ ಹಾಕುತ್ತಿದ್ದರು.
ಈ ವೇಳೆ ನನ್ನ ತಲೆಯಲ್ಲಿ ರಕ್ತ ಬರೋಕೆ ಶುರುವಾಯಿತು. ತುಂಬಾ ರಕ್ತ ಬಂತು. ಅಲ್ಲೇ ನಮ್ಮ ಆಸ್ಪತ್ರೆ ವೈದ್ಯರು ನನ್ನ ಭೇಟಿ ಮಾಡೋಕೆ ಬಂದಿದ್ದರು. ಈ ವೇಳೆ ಅವರೇ ಕೂಡಲೇ ಚಿಕಿತ್ಸೆ ನೀಡಿದರು. ಬಳಿಕ ಅಕ್ಕಿರಾಂಪುರದ ಆರೋಗ್ಯ ಕೇಂದ್ರಕ್ಕೆ ಕರೆತಂದರು ಎಂದು ಹೇಳಿದರು.
ಹೂವಿನಲ್ಲಿ ಕಲ್ಲು ಬಂದಿಲ್ಲ. ಯಾರೋ ದುಷ್ಕರ್ಮಿಗಳು ಎಸೆದಿದ್ದಾರೆ. ನಾನು 35 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನಗೆ ವಿರೋಧಿಗಳು ಬಹಳ ಕಡಿಮೆ. ದ್ವೇಷ ಇದ್ರೆ ಈ ರೀತಿಯಲ್ಲಿ ಮಾಡಬಾರದು. ಸಾರ್ವಜನಿಕ ವಲಯದಲ್ಲಿ ನಾವು ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.