ರಜೆ ಮುಗಿದ ತಕ್ಷಣ ಶಾಲೆ ಆರಂಭ: ಮಧು ಬಂಗಾರಪ್ಪ ಹೇಳಿಕೆ ಫುಲ್ ಟ್ರೋಲ್
ಜಾತಿಗಣತಿ ಸಮೀಕ್ಷೆಗೆ ಶಿಕ್ಷಕರನ್ನು ನೇಮಿಸುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆಯೊಂದನ್ನ ನೀಡಿದ್ದರು. ರಜೆ ಇರುವಾಗಲಷ್ಟೇ ಶಿಕ್ಷಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ರಜೆ ಮುಗಿದ ತಕ್ಷಣ ಶಾಲೆ ಆರಂಭವಾಗಲಿದೆ ಎಂದಿದ್ದಾರೆ.
ಅಂದರೆ ಶಾಲೆ ಆರಂಭವಾಗುವ ಹೊತ್ತಿಗೆ ಶಿಕ್ಷಕರೂ ಲಭ್ಯರಿರಲಿದ್ದಾರೆ ಎಂದು ಮಧು ಬಂಗಾರಪ್ಪ ನೀಡಿದ ಹೇಳಿಕೆಯ ಅರ್ಥವಾಗಿತ್ತು. ಆದರೆ ಇದನ್ನೇ ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ.
ನಮಗೆ ಗೊತ್ತೇ ಇರಲಿಲ್ಲ. ನಾವು ರಜೆ ಮುಗಿದ ತಕ್ಷಣ ಮತ್ತೆ ರಜೆಯೇ ಎಂದುಕೊಂಡಿದ್ದೆವು ಎಂದು ಕೆಲವರು ಹೇಳಿದರೆ, ಸಚಿವರು ಹೊಸ ವಿಚಾರ ಹೇಳ್ತಿದ್ದಾರೆ. ರಜೆ ಮುಗಿದ ಮೇಲೆ ಶಾಲೆ ಎಂದು ನಮಗೆ ಗೊತ್ತೇ ಇರಲಿಲ್ಲ ಎಂದು ತಮಾಷೆ ಮಾಡಿದ್ದಾರೆ.