ಇಂದಿರಾ ಕ್ಯಾಂಟಿನ್ ಗೆ ನಗರಸಭೆ ಆಯುಕ್ತರ ಹಠಾತ್ ಭೇಟಿ

ಮಂಗಳವಾರ, 4 ಸೆಪ್ಟಂಬರ್ 2018 (14:50 IST)
ಬೀದರ್ ನಗರಸಭೆ ಕಚೇರಿ ಬಳಿ ಇರುವ ಇಂದಿರಾ ಕ್ಯಾಂಟಿನ್ ಗೆ ನಗರಸಭೆ ಆಯುಕ್ತ ವಿ.ಮನೋಹರ್ ದಿಢೀರನೆ ಭೇಟಿ ನೀಡಿದರು. ಇಂದಿರಾ ಕ್ಯಾಂಟಿನಿನ ಊಟ ಸವಿದು, ಕಳಪೆ ಆಹಾರ ಸರಬರಾಜಿಗೆ ಅಕ್ರೋಶ ವ್ಯಕ್ತಪಡಿಸಿದರು.

ಒಳ್ಳೆ ಆಹಾರ ಸರಬರಾಜು ಮಾಡಿ ಅಂತಾ ಸರಕಾರ ಕೋಟ್ಯಾಂತರ ರೂ.ಗಳನ್ನು ಇಂದಿರಾ ಕ್ಯಾಂಟಿನ್ ಗಳಿಗಾಗಿ ಖರ್ಚು ಮಾಡುತ್ತಿದೆ. ಆದರೆ ಬೀದರ್ ನಗರದಲ್ಲಿ ಮಾತ್ರ ನುಚ್ಚು ಮಿಶ್ರಿತ ಅನ್ನ ಮಾಡಿ ಬಡವರ ಹೊಟ್ಟೆಗೆ ಹಾಕಲಾಗುತ್ತಿದೆ ಅಂತಾ ನಗರಸಭೆ ಆಯುಕ್ತ ವಿ.ಮನೋಹರ್ ಅಕ್ರೋಶ ವ್ಯಕ್ತಪಡಿಸಿದ್ರು.
ಅಕ್ಕಿ ನುಚ್ಚಿನಿಂದ ತಯಾರಿಸಿದ ಅನ್ನ, ಈ ಬಗ್ಗೆ ಹತ್ತಾರು ದೂರುಗಳು, ಇದನ್ನ ಸ್ವತಃ ಪರಿಶೀಲನೆಯನ್ನು ನಗರಸಭೆ ಆಯುಕ್ತರು ಮಾಡಿದರು.  

ಕೋಟೆ ನಗರಿ ಬೀದರ್ ನ ಇಂದಿರಾ ಕ್ಯಾಂಟಿನ್ ನಲ್ಲಿ ಎಲ್ಲವು ಅಂದುಕೊಂಡಂತೆ ನಡೆದ್ರೆ ಉತ್ತಮ ಆಹಾರ ಪೂರೈಕೆ ತಾಣವಾಗಬೇಕಿತ್ತು. ಆದ್ರೆ ಇಲ್ಲಿ ಕಳಪೆ ನುಚ್ಚು ಅಕ್ಕಿಯಿಂದ ಅನ್ನ ತಯಾರಿಸಿ ಅದನ್ನ ಹಸಿದು ಬಂದವರಿಗೆ ಕಾಟಾಚಾರಕ್ಕೆ ನೀಡಲಾಗುತ್ತಿದೆ. ಈ ಬಗ್ಗೆ ದೂರ ಬಂದಿದ್ದೆ ತಡ ಎಚ್ಚೆತ್ತ ಬೀದರ್ ನಗರಸಭೆ ಆಯುಕ್ತ ವಿ.ಮನೋಹರ್ ಕ್ಯಾಂಟಿನಿಗೆ ಭೇಟಿ ನೀಡಿ ಸ್ವತಃ ಊಟ ಮಾಡಿ ಪರಿಶೀಲನೆ ನಡೆಸಿದ್ರು. ಊಟದಲ್ಲಿ ಅರ್ಧಕ್ಕಿಂತ ಜಾಸ್ತಿ ನುಚ್ಚು ಅಕ್ಕಿಯಿಂದ ತಯಾರಿಸಲಾದ ಅನ್ನ ಇರೋದು ಕಂಡು ಬಂತು. ಈ ಬಗ್ಗೆ ಅವರು ಇಂದಿರಾ ಕ್ಯಾಂಟಿನಿನ ಮೇಲ್ವಿಚಾರಕರನ್ನ ತರಾಟೆಗೆ ತೆಗೆದುಕೊಂಡರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ