ಸರಕಾರ ಸಾಲ ಮನ್ನಾ ಮಾಡಿದ್ರೂ ನಿಲ್ಲದ ರೈತರ ಆತ್ಮಹತ್ಯೆ

ಶುಕ್ರವಾರ, 6 ಜುಲೈ 2018 (17:00 IST)
ಸಾಲ‌ ಮನ್ನಾ ಬಜೆಟ್ ನಲ್ಲಿ ಘೋಷಣೆ ಆದ ಬೆನ್ನಲ್ಲೇ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಜಪಡಸಲಗಿ ಗ್ರಾಮದಲ್ಲಿ ನಡೆದಿದೆ. ಸಾಲಬಾಧೆಯಿಂದ ಮರಕ್ಕೆ ನೇಣು ಹಾಕಿಕೊಂಡು  50 ವರ್ಷದ ಪಾಂಡಪ್ಪ ಅಂಬಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೃಷಿ ಪತ್ತಿನ ಸಹಕಾರಿ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ,ಕೈಸಾಲ ಸೇರಿ  ಸುಮಾರು ಐದು ಲಕ್ಷ. ರೂ ಗಿಂತ ಹೆಚ್ಚು ಸಾಲ ಮಾಡಿಕೊಂಡಿದ್ದ. ಪಾಂಡಪ್ಪ 1 ಎಕರೆ, 37 ಗುಂಟೆ ಜಮೀನು ಹೊಂದಿದ್ದು ಕಬ್ಬು ಬೆಳೆದಿದ್ದ. ಕಬ್ಬು ಬೆಳೆ ಸರಿಯಾಗಿ ಬೆಳೆದಿರಲಿಲ್ಲ. ಹೀಗಾಗಿ ಸಾಲ ಹೇಗೆ ತೀರಿಸೋದು ಅಂತ ಚಿಂತೆಗೀಡಾಗಿದ್ದ.
 
ಇವತ್ತು ಮಾನಸಿಕವಾಗಿ ಬಳಲಿದ್ದು ಜಮೀನಿನಲ್ಲಿ‌ರುವ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಜಮಖಂಡಿ ತಹಶಿಲ್ದಾರ ಪಿ.ಎಸ್. ಚೆನಗೊಂಡ, ಮತ್ತು ಜಮಖಂಡಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ