ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಏಕಾಏಕಿಯಾಗಿ ಬಿದ್ದ ಮರ; ಮುಂದೇನಾಯ್ತು?

ಮಂಗಳವಾರ, 4 ಸೆಪ್ಟಂಬರ್ 2018 (14:09 IST)
ಕಾಮಗಾರಿಯಲ್ಲಿ ಗುತ್ತಿಗೆ ನೀಡಿದ ಕಂಟ್ರಾಕ್ಟರ್ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಬೈಕ್ ಸವಾರರ ಮೇಲೆ ಮರ ಬಿದ್ದಿದೆ.

ಗ್ರಾಮ ಪಂಚಾಯತಿ ವತಿಯಿಂದ ಚರಂಡಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಬದಿಯಲ್ಲಿದ್ದ ಮರವನ್ನು ಕಡಿಯಲು ಮುಂದಾಗಿ ಗುತ್ತಿಗೆ ನೀಡಿದ್ದ ಕಂಟ್ರಾಕ್ಟರ್  ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಏಕಾಏಕಿ ಜೆ.ಸಿ.ಬಿ ಯಿಂದ ಮರವನ್ನು ಬೀಳಿಸಲು ಮುಂದಾದ ಪರಿಣಾಮ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರರ ಮೇಲೆ ಮರ ಬಿದ್ದಿದೆ.

ಬೈಕ್ ಸವಾರರು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಅಂಜನಪುರದ ಆದಿಲಕ್ಷ್ಮಿ ಹಾಗು ಸೋಮಶೇಖರ್ ತಮ್ಮ ಊರಿನ ಕಡೆಯಿಂದ ಆನೇಕಲ್ ಕಡೆ ಬರುತ್ತಿದ್ದಾಗ ಜೆ.ಸಿ‌.ಬಿ ಚಾಲಕನ ಅಜಾಗರೂಕತೆಯಿಂದ ಬೈಕ್ ಸವಾರರ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಬೈಕ್ ಸವಾರರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇನ್ನು ಗಂಭೀರ  ಗಾಯಗೊಂಡ ಬೈಕ್  ಸವಾರರನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.  ಘಟನೆಯಿಂದ ಸ್ಥಳೀಯರು ಕಂಟ್ರಾಕ್ಟರ್ ಹಾಗು ಜೆ.ಸಿ.ಬಿ ಚಾಲಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಸ್ಥಳದಿಂದ ಜೆ.ಸಿ‌.ಬಿ ಯನ್ನು ತೆಗೆದುಕೊಂಡು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ಕಂಟ್ರಾಕ್ಟರ್ ಹಾಗೂ ಜೆ.ಸಿ.ಬಿ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ