ತ್ರಿವರ್ಣ ಧ್ವಜ ಬಿಜೆಪಿಯವರೇ ವಿರೋಧ
ಬಾವುಟ ಬಳಕೆ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಚೀನಾದಿಂದ ವಸ್ತುಗಳ ಆಮದು ಜಾಸ್ತಿ ಆಗಿದೆಯಾ..? ಕಡಿಮೆ ಆಗಿದೆಯಾ..? ಮೇಕ್ ಇನ್ ಇಂಡಿಯಾ ಅಂತ ಮಾತಾಡ್ತಾರೆ. ಆದ್ರೆ, ವಸ್ತುಗಳನ್ನ ಹೊರ ದೇಶದಿಂದ ಆಮದು ಮಾಡಿಕೊಳ್ಳುವುದು ಹೆಚ್ಚಾಗಿದೆ. ಮಳೆಯಿಂದ ಸಾವಿರಾರು ಕೋಟಿ ನಷ್ಟವಾಗಿದೆ. ನಾವಿನ್ನೂ ಅದರ ಬಗ್ಗೆ ಸರ್ವೆ ಮಾಡಿಲ್ಲ. ದೇಶದ ಆರ್ಥಿಕ ಸ್ಥಿತಿ ಕಷ್ಟವಾಗಿದೆ. ಶ್ರೀಲಂಕಾದ ಪರಿಸ್ಥಿತಿ ದೇಶಕ್ಕೂ ಬರಬಹುದು ಅಂತ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಜೆಪಿ ಆಯೋಜಿಸಿರುವ ಹರ್ ಘರ್ ತಿರಂಗಕ್ಕೆ ವಿರೋಧ ಮಾಡಿದ್ದವರು ಯಾರು? ಭಾರತ ದೇಶದ ತ್ರಿವರ್ಣ ಧ್ವಜವನ್ನ ಸಾವರ್ಕರ್ ವಿರೋಧ ಮಾಡಿದ್ರು. RSSನವರು ವಿರೋಧ ಮಾಡಿದ್ದರು.ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಅಮೃತ ಮಹೋತ್ಸವವನ್ನ ರಾಜಕಾರಣಗೊಳಿಸುತ್ತಿದ್ದಾರೆ. ಸ್ವಾತಂತ್ರ್ಯೋತವಕ್ಕೆ ಬಿಜೆಪಿ ಕೊಡುಗೆ ಶೂನ್ಯ ಎಂದು ಆಡಳಿತ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ರು.